ಗುಬ್ಬಿ: ಗುಬ್ಬಿ ತಾಲ್ಲೂಕು ಕಡಬ ಗ್ರಾಮದ ಪೇಟೆ ಬೀದಿಯಲ್ಲಿ ರಸ್ತೆ ಮಧ್ಯೆ ದಿಢೀರ್ ಕುಸಿತ ಉಂಟಾಗಿ ದೊಡ್ಡ ಕಂದಕ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೆ ಕಂದಕದಲ್ಲಿ ನೀರು ಉಕ್ಕುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಈ ಜಾಗದಲ್ಲಿ ಅನಾದಿಕಾಲದಿಂದ ದೊಡ್ಡ ಬಾವಿ ಇತ್ತು. ಕಡಬ ಗ್ರಾಮಕ್ಕೆ ಕುಡಿಯುವ ನೀರು ಕೊಡುವ ಬಾವಿ ಬತ್ತಿದ ಮೇಲೆ ಮುಚ್ಚಲಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಳೆಯ ಬಾವಿಯಲ್ಲಿ ನೀರು ಹುಕ್ಕಿ ಕಂದಕ ಸೃಷ್ಟಿಸಿದೆ. ಬಾವಿ ಜಾಗ ಸಂಪೂರ್ಣ ಕಸಿಯಿತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಸುರಿದ ಮಳೆಯಿಂದ ಈ ಸ್ಥಳ ಕೆರೆಗೆ ಹತ್ತಿರವಾಗಿದೆ. ನೂರು ವರ್ಷದ ಹಳೆಯ ಬಾವಿ ಮುಚ್ಚಿ ಹಲವು ವರ್ಷಗಳೇ ಕಳೆದಿದ್ದರೂ ಅಂತರ್ಜಲ ಉಕ್ಕಿ ಬಾವಿ ಇರುವಿಕೆ ತೋರುತ್ತಿದೆ ಎನ್ನಲಾಗುತ್ತಿದೆ.
ಸೋಮವಾರ ಬೆಳಿಗ್ಗೆ ದಿಢೀರ್ ಕುಸಿದ ಕಂಡಿದ್ದು ರಸ್ತೆಯಲ್ಲಿ ಯಾರೋ ಓಡಾಡರದ ಕಾರಣ ಯಾವುದೇ ಅಪಾಯವಾಗಿಲ್ಲ. ಅಕ್ಕಪಕ್ಕದ ಅಂಗಡಿ ಮುಂಗಟ್ಟು ಸಹ ಕುಸಿಯುವ ಸಂಭವವಿದೆ ಎಂದು ಸ್ಥಳೀಯ ವ್ಯಾಪಾರಿ ಗೋಪಾಲಕೃಷ್ಣ ಶೆಟ್ಟಿ, ಮಧು ಶೆಟ್ಟಿ ಆತಂಕಗೊಂಡಿದ್ದು ಅಧಿಕಾರಿಗಳು ಸಮಸ್ಯೆಗಳು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ವರದಿ: ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು
PublicNext
04/10/2022 07:29 am