ಪಾವಗಡ: ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಇಂದು ತಾಲೂಕಿನ ವೆಂಕಟಾಪುರದ ಕುಷ್ಠ ರೋಗಿಗಳಿಗೆ ಹಾಗೂ ಕ್ಷಯ ರೋಗಿಗಳಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ದಿನಸಿ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಸರಳ ಜೀವನ ಗ್ರಾಮಸ್ವರಾಜ್ಯ, ರಾಮ ರಾಜ್ಯದ ಕಲ್ಪನೆ, ಕೃಷಿ ಮತ್ತು ಗ್ರಾಮದ್ಯೋಗಗಳ ಮೇಲೆ ಆಧಾರಿತ ಅರ್ಥಿಕ ನೀತಿ ಹಾಗೂ ಸ್ವಾವಲಂಭನೆಯ ಕಲ್ಪನೆ, ಕುಷ್ಠ ರೋಗಿಗಳ ಬಗ್ಗೆ ಕಾಳಜಿ ಉಳ್ಳ ಮಹಾತ್ಮ ಗಾಂಧೀಜಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಸಾಯಿ ರೆಡ್ಡಿ, ನವೀನ್ ಇದ್ದರು.
ವರದಿಳ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್, ತುಮಕೂರು
Kshetra Samachara
03/10/2022 10:56 pm