ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಅಪಘಾತದ ನೋವಿನಲ್ಲೂ ಮಾನವೀಯತೆ ಮೆರೆದ ಸೊಗಡು ಶಿವಣ್ಣ

ತುಮಕೂರು: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ನೋವಿನಲ್ಲಿಯೂ ಡಿಕ್ಕಿ ಹೊಡೆದ ಲಾರಿಯಲ್ಲಿದ್ದ ಕೃಷಿ ಕಾರ್ಮಿಕರಿಗೆ ಊಟ ಉಪಚಾರ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ತುಮಕೂರಿನ ಶಿರಾಗೇಟ್ ರಸ್ತೆ ಶೆಲ್ ಪೆಟ್ರೋಲ್ ಬಂಕ್ ಹತ್ತಿರ ಸೊಗಡು ಶಿವಣ್ಣ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಇವರು ಚಲಾಯಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಲಾರಿ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ಮಧ್ಯ ಭಾಗದ ಡಿವೈಡರ್‌ಗೆ ಅಪ್ಪಳಿಸಿದ್ದು, ಅದೃಷ್ಟವಶಾತ್ ಪ್ರಾಣಾಯಾಮದಿಂದ ಪಾರಾಗಿದ್ದಾರೆ.

ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ಜನರನ್ನು ತಮ್ಮ ಬಳಿಗೆ ಕರೆಸಿಕೊಂಡು ಶಿವಣ್ಣ ಅವರು ಲಾರಿ ಚಾಲಕನನ್ನು ವಿಚಾರಿಸಿದ್ದಾರೆ. ಆಗ ಲಾರಿ ಚಾಲಕ, ನಾವುಗಳು ಕೃಷಿ ಕಾರ್ಮಿಕರು, ದೂರದ ರಾಯಚೂರಿನವರು. ಕೃಷಿ ಕೆಲಸಕ್ಕಾಗಿ ಪ್ರತಿ ವರ್ಷ ಮಂಡ್ಯ ಜಿಲ್ಲೆಗೆ ಹೋಗುತ್ತೇವೆ. ಈ ಬಾರಿಯೂ ಬಂದು ಹೆಚ್ಚಿನ ಪ್ರಮಾಣದ ಕೆಲಸವಿಲ್ಲದ ಕಾರಣ ಮರಳಿ ರಾಯಚೂರಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ಕೃಷಿ ಕಾರ್ಮಿಕರನ್ನು ಕಂಡು ಅವರ ಸ್ಥಿತಿಯನ್ನು ಕಂಡು ಕೂಡಲೇ ಶಿವಣ್ಣ ಅವರು ಆಪ್ತರನ್ನು ಸ್ಥಳಕ್ಕೆ ಬರುವಂತೆ ತಿಳಿಸಿದರು. ಕೃಷಿ ಕಾರ್ಮಿಕರಿಗೆ ತಾವೇ ಸ್ವಯಂ ರಾತ್ರಿಯ ಊಟದ ವ್ಯವಸ್ಥೆ ಮಾಡಿಸಿ, ಮಾನವೀಯತೆ ಮೆರೆದಿದ್ದಾರೆ.

Edited By : Shivu K
PublicNext

PublicNext

10/10/2022 10:29 am

Cinque Terre

40.51 K

Cinque Terre

0