ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಆಟೋ ಚಕ್ರ ತಲೆ ಮೇಲೆ ಹರಿದು ಬಾಲಕ ಸಾವು

ಮಧುಗಿರಿ : ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನ ತಲೆ ಮೇಲೆ ಆಟೋ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಧುಗಿರಿ ಪಟ್ಟಣದ ವಿವೇಕಾನಂದ ಶಾಲೆಯ ಕುಶಾಲ್ (9) ಮೃತಪಟ್ಟ ಬಾಲಕನೆಂದು ತಿಳಿದು ಬಂದಿದೆ.

ಬಾಲಕ ಕುಶಾಲ್ ಬೆಂಕಿಪುರದ ಅಶ್ವತ್ಥ್ ಎಂಬುವವರ ಪುತ್ರ ನಾಗಿದ್ದು, ವಿವೇಕಾನಂದ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದ, ಸಂಜೆ ಮನೆಗೆ ಮರಳುವಾಗ ಆಟೋದಲ್ಲಿ ಬರುವಾಗ ಆಟೋ ಮುಂದೆ ಕುಳಿತಿದ್ದ ಅವನು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು ಅದೇ ಆಟೋದ ಹಿಂಬದಿಯ ಚಕ್ರ ತಲೆ ಮೇಲೆ ಹತ್ತಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದು ಪ್ರಕರಣ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Edited By : Abhishek Kamoji
Kshetra Samachara

Kshetra Samachara

27/09/2022 08:49 pm

Cinque Terre

9.46 K

Cinque Terre

0