ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂತ್‌ಗೆ ಎಚ್ಚರಿಕೆ ಕೊಟ್ಟು ಇಶಾನ್ ಕಿಶನ್ ಬೆನ್ನುತಟ್ಟಿದ ಡೇಲ್ ಸ್ಟೇಯ್ನ್

ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ, ಬ್ಯಾಟರ್ ಇಶಾನ್ ಕಿಶನ್ ಅವರನ್ನು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇಯ್ನ್ ಹೊಗಳಿಸಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ತಮ್ಮ ಸ್ಥಾನಕ್ಕೆ ಯಾರಾದರೂ ಬರುತ್ತಿದ್ದಾರೆ ಎಂದು ಚಿಂತಿಸಬೇಕು. ಸದ್ಯ ಬೆಳವಣಿಗೆ ನೋಡಿದರೆ ಇಶಾನ್ ಕಿಶನ್ ಹೋಗುವುದನ್ನು ಮತ್ತು ಉತ್ತಮವಾಗುವುದನ್ನು ನಾನು ನೋಡಿದ್ದೇನೆ. ಉತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಅತ್ಯದ್ಭುತ ಹೊಡೆದಗಳನ್ನು ಆಡುತ್ತಾರೆ ಎಂದು ಡೇಲ್ ಸ್ಟೇಯ್ನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಂತ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಮೂರು ಇನ್ನಿಂಗ್ಸ್‌ಗಳಲ್ಲಿ 20, 93 ಮತ್ತು 10 ರನ್ ಗಳಿಸಿದ್ದಾರೆ.

Edited By : Vijay Kumar
PublicNext

PublicNext

12/10/2022 11:40 am

Cinque Terre

23.97 K

Cinque Terre

0