ನವದೆಹಲಿ: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್‌ಗೆ ಹೋಲಿಕೆ ಮಾಡಿದ್ದಾರೆ.
ಸೂರ್ಯಕುಮಾರ್ ಯಾದವ್ ಮೈದಾನದ ಸುತ್ತಲೂ 360 ಡಿಗ್ರಿಗಳಲ್ಲಿ ಬ್ಯಾಟಿಂಗ್ ಮಾಡಿ ರನ್ ಗಳಿಸುತ್ತಾರೆ. "ಲ್ಯಾಪ್ ಶಾಟ್‌ಲ್, ಲೇಟ್ ಕಟ್‌ಗಳು... ಕೀಪರ್‌ನ ತಲೆಯ ಮೇಲೆ ಬಾಲ್ ಹಾರಿ ಹೋಗುವ ರೀತಿ ಸೂರ್ಯಕುಮಾರ್ ಬಾರಿಸುತ್ತಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.
ಇನ್ನು ಭಾರತ ತಂಡದಲ್ಲಿ ಸೂರ್ಯಕುಮಾರ್ ಅವರ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿದ ಪಾಂಟಿಂಗ್, ಸೂರ್ಯಕುಮಾರ್ ಅವರಿಗೆ ನಾಲ್ಕನೇ ಕ್ರಮಾಂಕವು ಸೂಕ್ತ. ಈ ವೇಳೆ ಅವರು ವಿಕೆಟ್ ಕಾಯ್ದುಕೊಂಡು ರನ್ ಗಳಿಸಬದು ತಿಳಿಸಿದ್ದಾರೆ.
PublicNext
16/08/2022 07:57 am