ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಕಮಲಾ ಮತ್ತು ವೆಂಕಪ್ಪ ಎಂ ಅಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ಅಮೇಚೂರ ಮಲ್ಲಕಂಬ ಅಸೊಸಿಯೇಶನ್ ವತಿಯಿಂದ ಗುಜರಾತನಲ್ಲಿ ಸೆಪ್ಟೆಂಬರ್ 27 ರಿಂದ ಜರುಗಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯ ಮಲ್ಲಕಂಬ ತಂಡದ ಆಯ್ಕೆ ಪ್ರಕಿಯೆ ನಡೆಯಿತು.
ವಿವಿಧ ಜಿಲ್ಲೆಗಳಿಂದ 16 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಶಂಕ್ರಪ್ಪ ಕೆ,ಶ್ರೀಧರ ಎಸ್ ಸಿ,ಶಿವಾನಂದ ಲಾಯಣ್ಣನವರ, ಹನುಮಂತಪ್ಪ ಏಕನಾಥ, ವಿಜಯ ಶಿರಭೂರ,ಪ್ರಭು ಕಳ್ಳೊಳ್ಳಿ ಆಯ್ಕೆ ಆಗಿದ್ದು ವಿದ್ಯಾರ್ಥಿನಿಯರಲ್ಲಿ ಅನುಪಮಾ ಕೆ,ಅನನ್ಯ ಎಸ್ ಎಚ್,ಮಂಜುಳಾ ಎಚ್,ಪ್ರತಿಭಾ ಎಸ್ ಡಿ,ಸಂಗೀತಾ, ಇಂದಿರಾ ಆಯ್ಕೆ ಆಗಿದ್ದಾರೆ. ವಿವಿಧ ಜಿಲ್ಲೆಗಳಿಂದ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಯ್ಕೆ ಪ್ರಕ್ರಿಯೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಉದಯಕುಮಾರ ಹಂಪಣ್ಣನವರ, ಉಪ ಪ್ರಚಾರ್ಯ ಡಾ. ಪರಶುರಾಮ ಬಾರ್ಕಿ,ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಇಂದಿನ ಆಧುನಿಕ ಭರಾಟೆಯ ಕ್ರೀಡೆಯಲ್ಲಿ ಸಿಲುಕಿ ಅಪ್ಪಟ ಭಾರತೀಯ ಮೂಲದ ಕ್ರೀಡೆಯಲ್ಲೊಂದಾದ ಮಲ್ಲಕಂಬ ಕ್ರೀಡೆಯನ್ನು ಇನ್ನು ಎತ್ತರಕ್ಕೆ ಬೆಳೆಸಬೇಕು ಇಂದಿನ ಯುವ ಸಮೂಹ ಮಲ್ಲಕಂಬ ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡಬೇಕು ಅಂದಾಗ ನಮ್ಮ ದೇಸಿಯ ಕ್ರೀಡೆಗಳು ಬೆಳೆಯಲು ಸಾಧ್ಯ ಎಂದರು.
PublicNext
15/08/2022 12:59 pm