ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ 40 ವರ್ಷ ವಯಸ್ಸಿನ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಇಂದು ಚಿನ್ನದ ಪದಕ ಗೆದ್ದಿದ್ದಾರೆ. ವಿಶೇಷವೆಂದರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶರತ್ ಕಮಲ್ ಅವರು ಗೆದ್ದ ಏಳನೇ ಚಿನ್ನದ ಪದಕ ಇದಾಗಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಶರತ್ ಕಮಲ್ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿ ಚಿನ್ನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಶರತ್ ಕಮಲ್ ಅವರು ಎರಡು ಬಾರಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನ (2006 ಮತ್ತು 2022), ಮೂರು ಬಾರಿ ಪುರುಷರ ತಂಡದಲ್ಲಿ ಚಿನ್ನ (2006, 2018 ಮತ್ತು 2022), ಒಂದು ಬಾರಿ ಪುರುಷರ ಡಬಲ್ಸ್‌ನಲ್ಲಿ ಚಿನ್ನ (2010) ಮತ್ತು ಮಿಶ್ರ ಡಬಲ್ಸ್‌ನಲ್ಲಿ ಚಿನ್ನ (2022) ಗೆದ್ದಿದ್ದಾರೆ.
PublicNext
08/08/2022 06:22 pm