ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸೇಬಲ್ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದಾರೆ. ಫೈನಲ್ ಪಂದ್ಯದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವಿನಾಶ್ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
27 ವರ್ಷದ ಮಹಾರಾಷ್ಟ್ರ ಮೂಲದ ಅವಿನಾಶ್ ಅವರ ವೈಯಕ್ತಿಕ ಉತ್ತಮ ಸಮಯ 8.12.48 ಆಗಿತ್ತು. 2019ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವಿನಾಶ್ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ 8.18.12 ನಿಮಿಷಗಳಲ್ಲಿ ಮುಗಿಸಿದರು. ಮಹಾರಾಷ್ಟ್ರದ ಶುಷ್ಕ ಬೀಡ್ ಜಿಲ್ಲೆಯ ಮಾಂಡ್ವಾ ಎಂಬ ಹಳ್ಳಿಯಲ್ಲಿ ಬೆಳೆದ ಅವಿನಾಶ್, ಶನಿವಾರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಹೆಮ್ಮೆಯ ಪದಕ ವಿಜೇತರಾದರು.
PublicNext
07/08/2022 03:01 pm