ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಮನ್‌ವೆಲ್ತ್ ಗೇಮ್ಸ್ 2022: ಇತಿಹಾಸದಲ್ಲೇ ಮೊದಲ ಬಾರಿ ಲಾನ್​ ಬೌಲ್ಸ್​​ನಲ್ಲಿ ಫೈನಲ್‌ಗೆ ಭಾರತ ಲಗ್ಗೆ!

ಬರ್ಮಿಂಗ್​ಹ್ಯಾಮ್​​: ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ ಅಥ್ಲಿಟ್ಸ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ಮಹಿಳಾ ಫೋರ್ಸ್ ಲಾನ್​ ಬೌಲ್ಸ್​​ ತಂಡ ಫೈನಲ್​​ಗೆ ಲಗ್ಗೆ ಹಾಕಿದ್ದು, ಈ ಮೂಲಕ ಮತ್ತೊಂದು ಪದಕ ಖಾತ್ರಿಪಡಿಸಿದೆ.

ವಿಶೇಷವೆಂದರೆ ಲಾನ್​ ಬೌಲ್ಸ್​​ನಲ್ಲಿ ಭಾರತವು ಚೊಚ್ಚಲ, ಐತಿಹಾಸಿಕ ಪದಕ ಸಾಧನೆಗೆ ಕ್ಷಣಗಣನೆ ಶುರುವಾಗಿದೆ. ಬಲಿಷ್ಠ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 16-13ರ ಅಂತರದಿಂದ ಗೆಲುವು ದಾಖಲಿಸಿತು. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್​ನಲ್ಲಿ ಸ್ವರ್ಣ ಪದಕಕ್ಕಾಗಿ ಹೋರಾಟ ನಡೆಸಲಿದೆ. ಒಂದು ವೇಳೆ ಸೋತರೂ ಭಾರತೀಯ ತಂಡ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳಲಿದೆ.

ಈ ಕ್ರೀಡೆಯಲ್ಲಿ ನ್ಯೂಜಿಲ್ಯಾಂಡ್ ಈಗಾಗಲೇ 40 ಪದಕ ಗೆದ್ದಿದೆ. ಆದರೆ, ಇಂದು ನಡೆದ ಸೆಮೀಸ್​ನಲ್ಲಿ ಭಾರತದ ಅಮೋಘ ಆಟಕ್ಕೆ ಕಿವೀಸ್‌ ಸೋತು ನಿರ್ಗಮಿಸಿತು.

Edited By : Vijay Kumar
PublicNext

PublicNext

01/08/2022 06:43 pm

Cinque Terre

34.75 K

Cinque Terre

1

ಸಂಬಂಧಿತ ಸುದ್ದಿ