ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ ವೆಲ್ತ್ ಗೇಮ್ಸ್ ಆರಂಭವಾಗಿದೆ. ವಿಶ್ವದ ಅತ್ಯುತ್ತಮ ಆಟಗಾರರು ವಿವಿಧ ಪಂದ್ಯಗಳಲ್ಲಿ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಪಂದ್ಯ ನಡೆಯುವ ವೇಳೆ ಎದುರಾಳಿ ತಂಡದ ಕೋಚ್ ತನ್ನ ಶೂ ಕಳಚಿ ಬ್ಯಾಡ್ಮಿಂಟನ್ ಆಟಗಾರನಿಗೆ ನೀಡಿದ ಹೃದಯ ಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ.
ಕಾಮನ್ವೆಲ್ತ್ ಗೇಮ್ಸ್ ಆಡಳಿತ ಮಂಡಳಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈ ವಿಡಿಯೋ ಕ್ರೀಡಾಭಿಮಾನಿಗಳ ಮನ ಗೆದ್ದಿದೆ.
ಈವೆಂಟ್ ನ ಎರಡನೇ ದಿನ ಮಲೇಷ್ಯಾ ಮತ್ತು ಜಮೈಕಾ ನಡುವೆ ಬ್ಯಾಡ್ಮಿಂಟನ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಜಮೈಕಾದ ಅತ್ಯುತ್ತಮ ಆಟಗಾರ ಸ್ಯಾಮ್ಯುಯೆಲ್ ರಿಕೆಟ್ಸ್ ಅವರ ಬೂಟ್ ಪಂದ್ಯದ ವೇಳೆ ಹರಿಯಿತು. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಜೊತೆಗೆ ಹರಿದ ಬೂಟ್ ತೊಟ್ಟು ಸ್ಯಾಮ್ಯುಯೆಲ್ ರಿಕೆಟ್ಸ್ ಗೆ ಆಡಲು ಕಷ್ಟವಾಗಿತ್ತು.
ಇದನ್ನು ಗಮನಿಸಿದ ಮಲೇಷಿಯಾದ ಕೋಚ್ ಹೆಂಡ್ರುವಾನ್, ಎದುರಾಳಿ ಆಟಗಾರ ರಿಕೆಟ್ಸ್ ಗೆ ತಾವು ಧರಿಸಿದ್ದ ಬೂಟ್ಗಳನ್ನು ತೆಗೆದುಕೊಟ್ಟು ಕ್ರೀಡಾಸ್ಫೂರ್ತಿ ತೋರಿದ್ದಾರೆ. ಈ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯದಲ್ಲಿ ರಿಕೆಟ್ಸ್ ತನ್ನ ಜೊತೆಗಾರ ಜೋಯಲ್ ಆಂಗಸ್ ವಿರುದ್ಧ 21-7, 21-11 ಅಂತರದಲ್ಲಿ ಸೋಲು ಅನುಭವಿಸಿದರು.
ತರಬೇತುದಾರ ಹೆಂಡ್ರೇವನ್ ಅವರ ಈ ಕಾರ್ಯವನ್ನು ಕಂಡು ಸ್ಟ್ಯಾಂಡ್ ನಲ್ಲಿ ಕುಳಿತಿದ್ದ ಪ್ರೇಕ್ಷಕರೆಲ್ಲರೂ ಚಪ್ಪಾಳೆ ತಟ್ಟಲಾರಂಭಿಸಿದರು. ರಿಕೆಟ್ಸ್ ಕೂಡ ಧನ್ಯವಾದ ಹೇಳಿದ್ದಾರೆ.
PublicNext
31/07/2022 08:56 pm