ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂದೆಯಾದ ಕೃನಾಲ್ ಪಾಂಡ್ಯ, ಮಗುವಿನ ಹೆಸರು ರಿವೀಲ್

ಮುಂಬೈ: ಟೀಂ ಇಂಡಿಯಾದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ತಂದೆಯಾಗಿದ್ದಾರೆ. ಕೃನಾಲ್ ಪಾಂಡ್ಯ ಪತ್ನಿ ಪಂಖುರಿ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮದುವೆಯಾಗಿ ಸುಮಾರು ನಾಲ್ಕೂವರೆ ವರ್ಷಗಳ ನಂತರ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಮುದ್ದಾದ ಮಗುವನ್ನು ಸ್ವಾಗತಿಸಿದ್ದಾರೆ. ಕೃನಾಲ್ ಪಾಂಡ್ಯ ಮತ್ತು ಪಂಖುರಿ ಶರ್ಮಾ 27 ಡಿಸೆಂಬರ್ 2017 ರಂದು ವಿವಾಹವಾಗಿದ್ದರು. ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖೂರಿ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಕೃನಾಲ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಪತ್ನಿ ಮತ್ತು ಮಗನನ್ನು ಚುಂಬಿಸುತ್ತಿದ್ದಾರೆ. ಇಬ್ಬರೂ ತಮ್ಮ ಮಗನಿಗೆ ಕವಿರ್ ಕೃನಾಲ್ ಪಾಂಡ್ಯ ಎಂದು ಹೆಸರಿಟ್ಟಿದ್ದಾರೆ.

Edited By : Vijay Kumar
PublicNext

PublicNext

24/07/2022 08:21 pm

Cinque Terre

25.28 K

Cinque Terre

0