ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND VS ENG| ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಸಿಡಿಸಿ ದಾಖಲೆ ಬರೆದ ಪಂತ್

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಭಾರತವು ಭರ್ಜರಿ ಗೆಲುವು ಸಾಧಿಸಿ 2-1 ಅಂತರದಲ್ಲಿ ವಶಪಸಡಿಸಿಕೊಂಡಿದೆ. ನಿನ್ನೆ ನಡೆದ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಿಷಬ್ ಪಂತ್ ದಾಖಲೆಯೊಂದನ್ನು ಬರೆದಿದ್ದಾರೆ.

ಈ ಪಂದ್ಯದಲ್ಲಿ ರಿಷಬ್ ಪಂತ್‌ ಏಕದಿನ ಕ್ರಿಕೆಟ್‌ನ ಚೊಚ್ಚಲ ಶತಕದ ಸಾಧನೆ ಮಾಡಿ ಸಂಭ್ರಮಿಸಿದರು. 'ಎಮಿರೇಟ್ಸ್ ಓಲ್ಡ್ ಟ್ರಫರ್ಡ್‌' ಅಂಗಳದಲ್ಲಿ ನಡೆದ ಪಂದ್ಯದಲ್ಲಿ 113 ಬಾಲ್‌ಗಳಲ್ಲಿ 2 ಸಿಕ್ಸರ್‌ನೊಂದಿಗೆ ಪಂತ್‌ 125ರನ್ ಗಳಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ಸ್ಕೋರ್‌ ಕೂಡ.

ರಾಹುಲ್ ದ್ರಾವಿಡ್, ಕೆ.ಎಲ್‌ ರಾಹುಲ್‌ ನಂತರ ಏಷ್ಯಾದಿಂದ ಹೊರಗೆ, ವಿದೇಶಿ ನೆಲದಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ವಿಕೆಟ್‌ಕೀಪರ್ ಪಂತ್. ರಾಹುಲ್‌ ದ್ರಾವಿಡ್ 1999ರಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ್ದರು. 2020ರಲ್ಲಿ ಕೆ.ಎಲ್‌ ರಾಹುಲ್‌ ಅವರು ನ್ಯೂಜಿಲೆಂಡ್‌ನಲ್ಲಿ ಶತಕ ಗಳಿಸಿದ್ದರು. ಆ ಪಟ್ಟಿಗೆ ಈಗ ಪಂತ್‌ ಸೇರಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಸತತ ಎಂಟು ಅಂತಾರಾಷ್ಟ್ರೀಯ ಸರಣಿಗಳನ್ನು ಗೆದ್ದಿದೆ.

Edited By : Vijay Kumar
PublicNext

PublicNext

18/07/2022 07:52 am

Cinque Terre

68.28 K

Cinque Terre

0

ಸಂಬಂಧಿತ ಸುದ್ದಿ