ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೊಚ್ಚಲ ವಿಂಬಲ್ಡನ್ ಗೆದ್ದು ಇತಿಹಾಸ ನಿರ್ಮಿಸಿದ : ಎಲಿನಾ ರೈಬಕಿನಾಗೆ ಗೆಲುವು

ವಿಂಬಲ್ಡನ್ 2022 ಮಹಿಳಾ ಸಿಂಗಲ್ಸ್ ನಲ್ಲಿ ಎಲಿನಾ ರೈಬಕಿನಾಗೆ ಭರ್ಜರಿ ಗೆಲುವು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಹೌದು ಕಜಕಿಸ್ತಾನದ ಎಲೆನಾ ರೈಬಾಕಿನಾ ಫೈನಲ್ ನಲ್ಲಿ ಓನ್ಸ್ ಜೆಬುರ್ ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಶನಿವಾರ ಜುಲೈ 9 ರಂದು, ಸೆಂಟರ್ ಕೋರ್ಟ್ ನಲ್ಲಿ ಐತಿಹಾಸಿಕ ಫೈನಲ್ ಪಂದ್ಯ ನಡೆಯಿತು.

ರಷ್ಯಾ ಮೂಲದ ಕಝಕ್ ಆಟಗಾರ್ತಿ ರೈಬಾಕಿನಾ ತನ್ನ ದೇಶದ ಮೊದಲ ಮಹಿಳಾ ಆಟಗಾರ್ತಿಯಾಗಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದರೆ, ಮತ್ತೊಂದೆಡೆ, ಟುನೀಶಿಯಾದ ಓನ್ಸ್ ಅವರು ಆಫ್ರಿಕಾ ಮತ್ತು ಅರಬ್ ಪ್ರದೇಶದಾದ್ಯಂತ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ಮಹಿಳಾ ಆಟಗಾರ್ತಿ ಕೂಡ ಆಗಿದ್ದರು.

ಹೀಗಾಗಿ ಈ ಪಂದ್ಯದಲ್ಲಿ ಯಾರೇ ಗೆದ್ದಿದ್ದರು ಅವರು ಇತಿಹಾಸ ನಿರ್ಮಿಸುತ್ತಿದ್ದರು. ಈಗ ಈ ಸಾಧನೆ ಎಲೆನಾ ಖಾತೆಗೆ ಬಂದಿದ್ದು, ಮೊದಲ ಸೆಟ್ ನಲ್ಲಿ ಹಿನ್ನಡೆ ಕಂಡರೂ ಅಮೋಘ ಕಮ್ ಬ್ಯಾಕ್ ಮಾಡಿ ಗೆಲುವು ಸಾಧಿಸಿದ್ದಾರೆ. 2017 ರಿಂದ ಸತತ ಐದನೇ ವರ್ಷ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ನ ಹೊಸ ಚಾಂಪಿಯನ್ ಆಗಿದ್ದಾರೆ. ಮುಂದಿನ ಎರಡು ಸೆಟ್ ಗಳಲ್ಲಿ ಅದ್ಭುತ ಪುನರಾಗಮನವನ್ನು ಮಾಡಿ 3-6, 6-2, 6-2 ರಲ್ಲಿ ಪಂದ್ಯವನ್ನು ಗೆದ್ದು ಪ್ರಶಸ್ತಿಯನ್ನು ಗೆದ್ದರು.

Edited By : Nirmala Aralikatti
PublicNext

PublicNext

10/07/2022 08:12 am

Cinque Terre

157.77 K

Cinque Terre

0