ಲಂಡನ್: ವಿಕೆಟ್ ಕೀಪರ್, ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಇಂಗ್ಲೆಂಡ್‌ನ ವೈಟ್-ಬಾಲ್ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಇಯಾನ್ ಮಾರ್ಗನ್ ನಂತರ ತಂಡವು ಹೊಸ ನಾಯಕನನ್ನು ಹುಡುಕುತ್ತಿತ್ತು. ಅದು ಬಟ್ಲರ್ ಆಯ್ಕೆಯೊಂದಿಗೆ ಕೊನೆಗೊಂಡಿದೆ. ಇಯಾನ್ ಮಾರ್ಗನ್ ಸುಮಾರು ಏಳೂವರೆ ವರ್ಷಗಳ ಕಾಲ ತಂಡದ ನಾಯಕರಾಗಿದ್ದರು. ಆ ಸಮಯದಲ್ಲಿ ಬಟ್ಲರ್ ತಂಡದ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದರು. ಈ ಸಮಯದಲ್ಲಿ ಅವರು ಒಂಬತ್ತು ಏಕದಿನ ಪಂದ್ಯ ಮತ್ತು 5 ಟಿ20 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. ನೆದರ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಮಾರ್ಗನ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು.
PublicNext
30/06/2022 10:03 pm