ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ಕ್ಯಾಪ್ಟನ್ ಬಾಬರ್ ಆಜಮ್ !

ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಜೀವನದಲ್ಲಿ ಒಂದು ದಾಖಲೆ ಮಾಡಿದ್ದರು. ಆದರೆ, ಅದನ್ನ ಈಗ ಪಾಕಿಸ್ತಾನ್‌ದ ಆಟಗಾರ ಬಾಬರ್ ಆಜಮ್ ಮುಗಿದು ಬಿಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಜಮ್ ಹ್ಯಾಟ್ರಿಕ್ ಸೆಂಚೂರಿ ಬಾರಿಸಿದ್ದಾರೆ.ಇಷ್ಟೇ ಅಲ್ಲದೇ ನಾಯಕನಾಗಿ ಅತಿ ವೇಗದಲ್ಲಿಯೇ 1000 ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬಾಬರ್ ಬರೆದಿದ್ದಾರೆ.

ವಿರಾಟ್ ಕೊಹ್ಲಿ 17 ಏಕದಿನ ಪಂದ್ಯ ಆಡಿದ್ದರು. ಇದರಲ್ಲಿ 1000 ರನ್ ಪೂರೈಸಿದ್ದರು. ಕೊಹ್ಲಿಯ ಈ ಒಂದು ದಾಖಲೆಯನ್ನ ಬಾಬರ್ ಕೇವಲ 13 ಇನ್ನಿಂಗ್ಸ್‌ ನಲ್ಲಿಯೇ ಮುರಿದಿದ್ದಾರೆ.

ಮೊನ್ನೆ ಐಸಿಸಿ ಮೆನ್ ಒನ್ ಡೇ Ranking ಪ್ರಕಟಗೊಂಡಿದ್ದು, ಪಾಕ್ ತಂಡದ ನಾಯಕ ಬಾಬರ್ ಆಜಮ್ ಈ ಪಟ್ಟಿಯಲ್ಲಿ ಟಾಪ್ ಅಲ್ಲಿಯೇ ಇದ್ದಾರೆ. ಪಾಕ್ ತಂಡದ ಮತ್ತೊಬ್ಬ ಆಟಗಾರ ಎಡಗೈ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಮೂರನೇ Rank ಏರಿದ್ದಾರೆ. ಟಾಪ್ ಟೆನ್ ಆಟಗಾರರ ಲಿಸ್ಟ್ ನಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿಯೇ ಇದ್ದಾರೆ.

Edited By :
PublicNext

PublicNext

10/06/2022 10:47 pm

Cinque Terre

45.76 K

Cinque Terre

8