ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಿ ಜೊತೆ ದಂಪತಿ ವಾಕಿಂಗ್ : ಸೌಲಭ್ಯ ದುರುಪಯೋಗ ಕ್ರಮ ಕೈಗೊಂಡ ಸರ್ಕಾರ

ದೆಹಲಿ : ಸರ್ಕಾರಿ ಅಧಿಕಾರಿಗಳಿಗೆ ವಿವಿಧ ಹಂತಗಳಲ್ಲಿ ಕೆಲವು ಸೌಲಭ್ಯಗಳನ್ನು ನೀಡಲಾಗಿರುತ್ತದೆ. ಆದರೆ ಅಂತಹ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡರೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎನ್ನುವುದಕ್ಕೆ ಈ ವರ್ಗಾವಣೆಯೇ ಸಾಕ್ಷಿಯಾಗಿದೆ. ಹೌದು IAS ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ವಿರುದ್ಧ ಸೌಲಭ್ಯಗಳನ್ನ ರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನ ಕೇಂದ್ರ ಸರ್ಕಾರ ವರ್ಗಾವಣೆ ಮಾಡಿ ಆದೇಶ ನೀಡಿದೆ.

AGMUT ಕೇಡರ್ ನ ಐಎಎಸ್ ಅಧಿಕಾರಿಗಳಾದ ಖಿರ್ವಾರ್ ಅವರನ್ನು ದೆಹಲಿಯಿಂದ ಲಡಾಖ್ ಗೆ ಮತ್ತು ದುಗ್ಗಾ ಅವರನ್ನ ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.

ನಡೆದದ್ದಾದರೂ ಏನು?

ಕ್ರೀಡಾಂಗಣದಲ್ಲಿ ನಾಯಿ ಜೊತೆ ಐಎಎಸ್ ಅಧಿಕಾರಿಗಳಿಬ್ಬರು ವಾಕಿಂಗ್ ಮಾಡುವ ಹಿನ್ನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಅಥ್ಲಿಟ್ ಗಳನ್ನ ಪ್ಯಾಕಪ್ ಮಾಡಿ ಕಳುಹಿಸಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಫ್ಲೆಡ್ ಲೈಟ್ಸ್ ಮೂಲಕ ಕ್ರೀಡಾಪಟುಗಳಿಗೆ ರಾತ್ರಿ ವೇಳೆಯೂ ತರಬೇತಿ ನೀಡಲಾಗುತ್ತಿತ್ತು. ಆದರೆ ಈ ಅಧಿಕಾರಿಗಳು ತಮ್ಮ ನಾಯಿಯ ಜೊತೆ ಟರ್ಫ್ ಮೇಲೆ ವಾಕಿಂಗ್ ಮಾಡುವ ಸಲುವಾಗಿ ಕ್ರೀಡಾಪಟುಗಳನ್ನ ಮನೆಗೆ ಕಳುಹಿಸುತ್ತಿದ್ದರು ಅನ್ನೋ ಆರೋಪ ಕೇಳಿಬಂದಿತ್ತು.

Edited By : Nirmala Aralikatti
PublicNext

PublicNext

27/05/2022 08:38 am

Cinque Terre

50.04 K

Cinque Terre

6