ಮುಂಬೈ: ಕುತೂಹಲ ಮೂಡಿಸಿದ್ದ ಈ ಬಾರಿ ಐಪಿಎಲ್ ಟೂರ್ನಿಯು ಅಂತಿಮ ಘಟ್ಟ ತಲುಪಿದ್ದು ಬಲಿಷ್ಠ ನಾಲ್ಕು ತಂಡಗಳು ಪ್ಲೇ ಆಫ್ ತಲುಪಿವೆ. ಅದರಲ್ಲೂ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ ಗೆಲ್ಲುವ ರೇಸ್‌ನಲ್ಲಿದೆ. ಅದೃಷ್ಟದ ಬಲದಿಂದ ಪ್ಲೇ ಆಫ್ ತಲುಪಿರುವ ಆರ್‌ಸಿಬಿ ಮುಂದೆ ಈಗ ದೊಡ್ಡ ಸವಾಲಿದೆ. ತನ್ನ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಬೇಕಾದರೆ ಮುಂದಿನ ಮೂರು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಈ ಮೂವರು ಬ್ಯಾಟರ್‌ಗಳು ಸಿಡಿದ್ರೆ ಗೆಲುವು ನಮ್ದೆ:
ಹದಿನಾಲ್ಕು ವರ್ಷದ ಕಪ್ ವನವಾಸಕ್ಕೆ ಈ ಬಾರಿ ತೆರೆಬೀಳಬೇಕಾದ್ರೆ ಬೆಂಗಳೂರು ತಂಡದಲ್ಲಿ ಈ ಮೂವರು ಆಟಗಾರರು ಸಿಡಿಯಲೇ ಬೇಕು. ಕೊಹ್ಲಿ ವಿರಾಟ ರೂಪ ತೋರಿಸಿದರೆ, ಗ್ಲೇನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಅಂತಿಮವಾಗಿ ಸ್ಫೋಟಕ ಆಟ ಆಡಿದರೆ 'ಈ ಬಾರಿ ಕಪ್ ನಮ್ದೆ' ಅನ್ನೋದ್ರಲ್ಲಿ ಅನುಮಾನವಿಲ್ಲ.
ಅತಿಯಾದ ಆತ್ಮವಿಶ್ವಾಸ ಮುಳುವಾಗುತ್ತಾ?:
ಕಳೆದ ಎರಡು ಸೀಸನ್‌ಗೆ ಹೋಲಿಸಿದರೆ ಅತಿಯಾದ ಆತ್ಮವಿಶ್ವಾಸದಿಂದಲೇ ಎಲಿಮಿನೇಟರ್‌ನಲ್ಲಿ ಹೊರಬಿದ್ದಿದ್ದಾರೆ. ಆದ್ದರಿಂದ ಈ ಬಾರಿ ಫಾಫ್ ಡು ಪ್ಲೆಸ್ಸಿಸ್ ಅವರ ಅನುಭವದ ನಾಯಕತ್ವದಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದು ಕಪ್ ಗೆಲ್ಲಲಿ ಅನ್ನೋದು ನಮ್ಮ ಆಶಯ.
PublicNext
24/05/2022 03:13 pm