ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಇಂದು ಹೈದರಾಬಾದ್‌ಗೆ ಡೆಲ್ಲಿ ಸವಾಲು- ಕೇನ್‌ಗೆ ಕೈಕೊಟ್ಟ ಸ್ಟಾರ್​ ಆಲ್​​ರೌಂಡರ್​​

ಮುಂಬೈ: ಐಪಿಎಲ್ 2022ರ ಭಾಗವಾಗಿ ಇಂದು ನಡೆಯಲಿರುವ 50ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಹೋರಾಡಲಿವೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಪಂದ್ಯವು ಹೈದರಾಬಾದ್‌ಗೆ ಬಾರಿ ಮಹತ್ವದ್ದಾಗಿದೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್‌ ಗೆದ್ದರೆ ಕ್ವಾಲಿಫಯರ್ ಪ್ರವೇಶ ಕನಸನ್ನು ಜೀವಂತವಾಗಿಸಿಕೊಳ್ಳಲಿದೆ. ಇದರ ಪರಿಣಾಮ ಆರ್‌ಸಿಬಿ ಮೇಲೆ ಬೀಳಲಿದೆ. ಹೈದರಾಬಾದ್ ತಂಡವು ಇಂದು ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ 3 ಅಥವಾ 4ನೇ ಸ್ಥಾನಕ್ಕೆ ಏರಲಿದೆ. ಇದರಿಂದಾಗಿ ಆರ್‌ಸಿಬಿ ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ಇಳಿಯಲಿದೆ. ಇದರಿಂದಾಗಿ ಆರ್‌ಸಿಬಿಗೆ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಲಿದೆ.

ಇತ್ತ ಹೈದ್ರಾಬಾದ್​ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್​​ ಮತ್ತೆ ತಂಡದಿಂದ ದೂರ ಉಳಿಯಲಿದ್ದಾರೆ. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕೈ ಇಂಜುರಿಗೆ ತುತ್ತಾಗಿದ್ದ ಸುಂದರ್, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಕೋಚ್​ ಟಾಮ್ ಮೂಡಿ ತಿಳಿಸಿದ್ದಾರೆ.

ಸತತ 2 ಸೋಲಿನಿಂದ ಕಂಗೆಟ್ಟಿರುವ ಮಧ್ಯೆ ಪ್ರಮುಖ ಆಲ್​​ರೌಂಡರ್ ಇಂಜುರಿ ಆಗಿರೋದು ಕೇನ್ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೆ ಟಿ.ನಟರಾಜನ್​ ಕೂಡ ಇಂಜುರಿಯಿಂದ ಬಳಲುತ್ತಿರುವುದಾಗಿ ಮೂಲಗಳು ತಿಳಿಸಿವೆ.

Edited By : Vijay Kumar
PublicNext

PublicNext

05/05/2022 07:48 am

Cinque Terre

23.9 K

Cinque Terre

1

ಸಂಬಂಧಿತ ಸುದ್ದಿ