ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಟೂರ್ನಿಯ ಫೈನಲ್ ಪಂದ್ಯವು ಮೇ 29ರಂದು ನಡೆಯಲಿದೆ.
ಹೌದು. ಐಪಿಎಲ್ 2022ರ ಟೂರ್ನಿ ಅಂತಿಮ ಹಂತಕ್ಕೆ ತಲುಪುತ್ತಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ಲೇಆಫ್‌ಗಳು ಮತ್ತು ಅಂತಿಮ ಹಣಾಹಣಿಯ (ಫೈನಲ್) ವೇಳಾಪಟ್ಟಿ ಮತ್ತು ಸ್ಥಳಗಳನ್ನು ಪ್ರಕಟಿಸಿದೆ.
ಐಪಿಎಲ್ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಕೋಲ್ಕತ್ತಾದಲ್ಲಿ ಕ್ರಮವಾಗಿ ಮೇ 24 ಮತ್ತು ಮೇ 25ರಂದು ನಡೆಯಲಿವೆ. ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದ್ದು, ಮೇ 27 ಮತ್ತು 29ರಂದು ಈ ಪಂದ್ಯಗಳು ಪ್ರೇಕ್ಷಕರ ಮುಂದೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
PublicNext
03/05/2022 09:03 pm