ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಡೆಲ್ಲಿ ತಂಡದ ಆಟಗಾರ ಮಿಚೆಲ್ ಮಾರ್ಷ್‌ಗೆ ಕೊರೊನಾ, ಆಸ್ಪತ್ರೆಗೆ ದಾಖಲು; ನಾಳೆಯ ಪಂದ್ಯ ಕ್ಯಾನ್ಸಲ್.?

ಮುಂಬೈ: ದೆಹಲಿ ತಂಡದ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತಂಕದ ವಿಚಾರ ಅಂದ್ರೆ ಈ ಬಾರಿ ಆಟಗಾರನಿಗೆ ಸೋಂಕು ತಗುಲಿದೆ.

ಮಿಚೆಲ್ ಮಾರ್ಷ್​ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಏಪ್ರಿಲ್ 17ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ದೆಹಲಿ ತಂಡದ ಒಟ್ಟು ಮೂವರಿಗೆ ಕೊರೊನಾ ದೃಢಪಟ್ಟಿದೆ. ಇನ್ನೊಂದು ವಿಚಾರ ಅಂದ್ರೆ ನಾಳೆ ದೆಹಲಿ ತಂಡ ಪಂಜಾಬ್ ಕಿಂಗ್ಸ್​ ಇಲೆವೆನ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಆದರೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ನಾಳಿನ ಪಂದ್ಯ ನಡೆಯುತ್ತಾ? ಇಲ್ಲವಾ ಎನ್ನುವ ಪ್ರಶ್ನೆ ಎದುರಾಗಿದೆ.

ಮತ್ತೊಂದು ಆತಂಕದ ವಿಚಾರವೆಂದರೆ ಏಪ್ರಿಲ್ 14ರಂದು ದೆಹಲಿ ತಂಡ ಆರ್​​ಸಿಬಿ ವಿರುದ್ಧ ಸೆಣಸಾಟ ನಡೆಸಿತ್ತು. ಆರ್​ಸಿಬಿ ಪಂದ್ಯ ಆಡುವ ಮೊದಲೇ ದೆಹಲಿ ತಂಡದ ಸಿಬ್ಬಂದಿಗೆ ಕೊರೊನಾ ಸೋಂಕು ಇದೆ ಅನ್ನೋದು ಸಾಬೀತಾಗಿತ್ತು. ಇದೀಗ ಆಟಗಾರನಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರ್​ಸಿಬಿ ಆಟಗಾರರಿಗೂ ಕೊರೊನಾ ಭಯ ಶುರುವಾಗಿದೆ.

Edited By : Vijay Kumar
PublicNext

PublicNext

18/04/2022 09:16 pm

Cinque Terre

218.19 K

Cinque Terre

3

ಸಂಬಂಧಿತ ಸುದ್ದಿ