ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: RCB vs KKR: ಆರ್ ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದ ಕೆಕೆಆರ್- ಪ್ಲೆಸಿಸ್ ಪಡೆಗೆ 129 ರನ್‌ಗಳ ಗುರಿ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಆಲೌಟ್ ಗೆ ತುತ್ತಾಗಿದೆ. ಈ ಮೂಲಕ ಆರ್ ಸಿಬಿಗೆ 129 ರನ್‌ಗಳ ಸಾಧಾರಣ ಗುರಿ ನೀಡಿದೆ.

ಐಪಿಎಲ್ 2022ರ 6ನೇ ಪಂದ್ಯದಲ್ಲಿ ಟಾಸ್ ಗೆದ್ದವ ಬೆಂಗಳೂರು ತಂಡದ ನಾಯಕ ಫಾಪ್ ಡು ಪ್ಲೆಸಿಸಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಬ್ಯಾಟಿಂಗ್ ಮಾಡಿದ ಕೆಕೆಆರ್ 18.5 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಲು ಶಕ್ತವಾಯಿತು.

ಕೆಕೆಆರ್ ಪರ ಆಂಡ್ರೆ ರಸಲ್ 25 ರನ್ ಬಿಟ್ಟರೆ ಉಳಿದ ಆಟಗಾರರು 20 ರನ್‌ಗಳ ಗಡಿ ದಾಟಲು ವಿಫಲರಾದರು. ಇನ್ನು ಆರ್ ಸಿಬಿ ಪರ ವನಿಂದು ಹಸರಂಗ ಡಿ ಸಿಲ್ವ 4 ವಿಕೆಟ್ ಕಿತ್ತು ಮಿಂಚಿದರೆ, ಹರ್ಷಲ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ ಎರಡು ಓವರ್ ಮೆಡನ್ ಮಾಡಿ ಪ್ರಮುಖ 2 ವಿಕೆಟ್ ಪಡೆದು ಸೈ ಎನಿಸಿಕೊಂಡರು. ಉಳಿದಂತೆ ಅಕ್ಷ ದೀಪ್ ಅತಿ ಹೆಚ್ಚು 45 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಕಿತ್ತರು.

Edited By : Vijay Kumar
PublicNext

PublicNext

30/03/2022 09:21 pm

Cinque Terre

35.36 K

Cinque Terre

1