ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನೂತನ ನಾಯಕ ಫಾಫ್ ಡುಪ್ಲೆಸಿಸ್, ಕನ್ನಡ ಚಲನಚಿತ್ರದ ಖ್ಯಾತ ಗೀತೆ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಧ್ವನಿಗೂಡಿಸಿದ್ದಾರೆ.
ಆರ್‌ಸಿಬಿ ಇನ್‌ಸೈಡರ್ ಮಿಸ್ಟರ್ ನ್ಯಾಗ್ಸ್ ಕಾರ್ಯಕ್ರಮದಲ್ಲಿ ಫಾಫ್ ಡುಪ್ಲೆಸಿಸ್ ಈ ಹಾಡನ್ನು ಹೇಳಿದ್ದಾರೆ. 1992ರಲ್ಲಿ ಬಿಡುಗೆಯಾದ 'ಆಕಸ್ಮಿಕ' ಚಿತ್ರದ ಈ ಹಾಡಿಗೆ ಹಂಸಲೇಖ ಸಾಹಿತ್ಯ ಬರೆದಿದ್ದರೆ, ಡಾ. ರಾಜ್‌ಕುಮಾರ್ ಹಾಡಿ ನಟಿಸಿದ್ದರು. ಇದು ಇಂದಿಗೂ ಕನ್ನಡದ ಸೂಪರ್ ಹಿಟ್ ಹಾಡಾಗಿದ್ದು, ಆರ್‌ಸಿಬಿ ಇನ್‌ಸೈಡರ್‌ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್‌ರಿಂದ ಈ ಹಾಡನ್ನ ಹೇಳಿದ್ದಾರೆ.
PublicNext
24/03/2022 10:07 pm