ನವದೆಹಲಿ: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಿರಾಟ್ ಕೊಹ್ಲಿಯಿಂದ ಫಾಫ್ ಡು ಪ್ಲೆಸಿಸ್ ಹೆಗಲೇರಿದೆ. 2021ರ ಅವೃತ್ತಿಯ ಎರಡನೇ ಹಂತದ ಪಂದ್ಯಗಳು ಆರಂಭವಾಗುತ್ತದ್ದಂತೆಯೇ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದರು. ಮುಂದಿನ ಆವೃತ್ತಿಗೆ ತಾನು ಆಟಗಾರನಾಗಿ ಮಾತ್ರವೇ ಮುಂದುವರಿಯಲಿದ್ದೇನೆ ಎಂದಿದ್ದರು ವಿರಾಟ್ ಕೊಹ್ಲಿ. ಹೀಗಾಗಿ ಈ ಬಾರಿಯ ಐಪಿಎಲ್ ಹಿನ್ನೆಲೆಯಲ್ಲಿ ಆರ್‌ಸಿಬಿ ಹೊಸ ನಾಯಕನನ್ನು ಆಯ್ಕೆ ಮಾಡಿದೆ.
ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. "ವಿರಾಟ್ ಕೊಹ್ಲಿ ಬಹಳ ಕಾಲದಿಂದ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅದು ಆರನಿಗೆ ಸಾಕಷ್ಟು ದೊಡ್ಡ ಹೊರೆಯಾಗಿತ್ತು ಎಂದು ನಾನು ಭಾವಿಸುತ್ತೇನೆ. ಆ ಕಾರಣದಿಂದಾಗಿಯೇ ಅವರ ಆ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಅವರು ಈಗ ನಿರಾಳರಾಗಿದ್ದು ಎದುರಾಳಿ ತಂಡಗಳ ಪಾಕಿಗೆ ಮತ್ತಷ್ಟು ಅಪಾಯಕಾರಿ ಆಟಗಾರನಾಗಲಿದ್ದಾರೆ" ಎಂದು ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ.
"ವಿರಾಟ್ ಕೊಹ್ಲಿ ನಿರಾಳವಾಗಿರುವುದು ಒಳ್ಳೆಯ ಸಂಗತಿ. ಅವರ ವೃತ್ತಿ ಜೀವನದ ಮುಂದಿನ ಕೆಲ ವರ್ಷಗಳ ಆಟವನ್ನು ಯಾವುದೇ ಒತ್ತಡಗಳು ಇಲ್ಲದೆ ಅವರು ಚೆನ್ನಾಗಿ ಆನಂದಿಸಲಿ" ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಪ್ರತಿಕ್ರಿಯೆ ನಿಡಿದ್ದಾರೆ.
PublicNext
17/03/2022 10:56 pm