ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶೇಷ ಅಭಿಮಾನಿಗೆ ವಿರಾಟ್ ಕೊಹ್ಲಿ ಗಿಫ್ಟ್‌

ಮೊಹಾಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಅಭಿಮಾನಿಗೆ ಉಡುಗೊರೆ ನೀಡಿದ್ದಾರೆ.

ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ಬಸ್ ಹತ್ತಲು ಸಿದ್ಧತೆ ನಡೆಸಿತ್ತು. ಅದೇ ಸಮಯಕ್ಕೆ ವಿಶೇಷ ಸಾಮರ್ಥ್ಯ ಹೊಂದಿರುವ ಅಭಿಮಾನಿ ಧರ್ಮವೀರ್ ಪಾಲ್‌ ಬಸ್‌ ಸಮೀಪದಲ್ಲೇ ನಿಂತಿದ್ದರು. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ ಬಸ್‌ನಿಂದ ಕೆಳಗಿಳಿದು ಅವರ ಬಳಿಗೆ ಬಂದು ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೂಡ ಧರ್ಮವೀರ್ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, 'ತುಂಬಾ ಧನ್ಯವಾದಗಳು ಚಾಂಪಿಯನ್. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ. ನಿಮ್ಮ ಆಟ ಇನ್ನೂ ಕೆಲವು ವರ್ಷಗಳ ಕಾಲ ಮುಂದುವರಿಯಲು ದೇವರು ಆಶೀರ್ವದಿಸಲಿ" ಎಂದು ಬರೆದುಕೊಂಡಿದ್ದಾರೆ.

ಧರ್ಮವೀರ್ ಅವರು ಟೀಂ ಇಂಡಿಯಾದ ಬಹಳಷ್ಟು ಪಂದ್ಯಗಳಿಗೆ ಹಾಜರಾಗಲು ಹೆಸರುವಾಸಿಯಾಗಿದ್ದಾರೆ. ಅವರು ಸಚಿನ್, ಎಂ.ಎಸ್ ಧೋನಿ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಅವರಂತಹ ಆಟಗಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸದ್ಯ ಮಧ್ಯಪ್ರದೇಶ ಧರ್ಮವೀರ್ ಪಾಲ್ ಅವರು ವಿಕಲಚೇತನರ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.

Edited By : Vijay Kumar
PublicNext

PublicNext

07/03/2022 01:31 pm

Cinque Terre

66.7 K

Cinque Terre

3