ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಹ್ಲಿ ಸ್ಥಾನದಲ್ಲಿ ಆಡಿದ್ದಲ್ಲದೇ ಅವರನ್ನೇ ಹಿಂದಿಕ್ಕಿ ಶ್ರೇಯಸ್​ ಅಯ್ಯರ್ ಸಾಧನೆ

ಧರ್ಮಶಾಲಾ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಕ್ರಿಕೆಟ್‌ ಸರಣಿಯಲ್ಲಿ ವಿರಾಟ್​ ಕೊಹ್ಲಿ ಸ್ಥಾನ (ಮೂರನೇ ಕ್ರಮಾಂಕ)ದಲ್ಲಿ ಬ್ಯಾಟಿಂಗ್ ಮಾಡಿದ್ದ ಯುವ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಸತತ 3 ಅರ್ಧಶತಕ ಸೇರಿದಂತೆ 204 ರನ್ ​ಗಳಿಸಿದರು. ಈ ಮೂಲಕ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಅಯ್ಯರ್ ಕ್ರಮವಾಗಿ 57, 74 ಮತ್ತು 73 ರನ್ ​ಗಳಿಸಿದ್ದರು. ವಿಶೇಷವೆಂದರೆ ಈ ಮೂರು ಪಂದ್ಯಗಳಲ್ಲೂ ಅವರು ಅಜೇಯರಾಗುಳಿದಿದ್ದರು. ಇದರೊಂದಿಗೆ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಗರಿಷ್ಠ ರನ್​ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅಯ್ಯರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 2016ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕ್ರಮವಾಗಿ 3 ಅರ್ಧಶತಕಗಳ ಸಹಿತ 199 ರನ್​​ ಸಿಡಿಸಿದ್ದರು.

3 ಪಂದ್ಯಗಳ ಸರಣಿಯಲ್ಲಿ ಗರಿಷ್ಠ ರನ್​ ಬಾರಿಸಿದ ಬ್ಯಾಟರ್​ಗಳು

* ಕಾಲಿನ್ ಮನ್ರೋ -223 ರನ್

* ​ಡೇವಿಡ್​ ವಾರ್ನರ್​-217 ರನ್​

* ಹಜರುತ್ತುಲ್ಲಾ ಝಾಜೈ-204 ರನ್​

* ಶ್ರೇಯಸ್​ ಅಯ್ಯರ್​-204 ರನ್​

* ಮೊಹಮ್ಮದ್ ರಿಜ್ವಾನ್​-203 ರನ್

* ​ವಿರಾಟ್ ಕೊಹ್ಲಿ-199ರನ್​

Edited By : Vijay Kumar
PublicNext

PublicNext

28/02/2022 05:34 pm

Cinque Terre

38.41 K

Cinque Terre

0

ಸಂಬಂಧಿತ ಸುದ್ದಿ