ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವಕಪ್ ಗೆದ್ದ ಅಂಡರ್-19 ಭಾರತ ತಂಡದ ಆ ಒಂದು ಸತ್ಯ ರಿವೀಲ್ !

ನವದೆಹಲಿ: ಕ್ರಿಕೆಟ್ ಆಟಗಾರರಿಗೂ ಕೋವಿಡ್ ಎಫೆಕ್ಟ್ ಮಾಡಿತ್ತು. ಭಾರತ ತಂಡದ ಅಂಡರ್-19 ತಂಡದ ಆಟಗಾರರು ವೆಸ್ಟ್ ಇಂಡೀಸ್ ಗೆ ಬಂದಿಳಿದಿದ್ದೇ ತಡ. ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಇರೋ 7 ಜನ ಆಟಗಾರರನ್ನ ವಾಪಸ್ ಕಳಿಸಲು ಅಧಿಕಾರಿಗಳು ತಿಳಿಸಿದ್ದರು. ಈ ವಿಷಯ ಈಗ ಬೆಳಕಿಗೆ ಬಂದಿದೆ.

ಅಂಡರ್-19 ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿದೆ. ಆದರೆ ಇದೇ ಕಪ್ ಆಗಿಯೇ ವೆಸ್ಟ್ ಇಂಡೀಸ್‌ಗೆ ಬಂದಿಳಿದ್ದಿ ಆಟಗಾರರಿಗೆ ಶಾಕ್ ಕಾದಿತ್ತು. ಭಾರತ ತಂಡ ಆಮ್‌ಸ್ಟರ್ಡ್‌ಮಾರ್ಗವಾಗಿ ದುಬ್ಯಾಯಿಂದ ಪೋರ್ಟ್ ಆಫ್ ಸ್ಪೇನ್‌ಗೆ ಬಂದಿಳಿಯಿತು. ಇಲ್ಲಿಯೇ ಅಧಿಕಾರಿಗಳು ಭಾರತ ತಂಡದ ಲಸಿಕೆ ಹಾಕಿಸಿಕೊಳ್ಳದ 7 ಜನ ಆಟಗಾರರನ್ನ ವಾಪಸ್ ಕಳಿಸಲು ಸೂಚಿಸಿದ್ದರು.

ಇದರಿಂದ ನಮಗೆ ಭಾರಿ ತೊಂದರೆ ಆಗಿತ್ತು. ಲಸಿಕೆ ಹಾಕಿಸಿಕೊಳ್ಳದೇ ಇರೋರನ್ನ ದೂರವೆ ಇಡಲಾಗಿತ್ತು. ಕೊನೆಗೆ ಟ್ರೆನಿಡಾಡ್ ಸರ್ಕಾರದೊಂದಿಗೆ ಮಾತುಕತೆ ಆದ್ಮೇಲೆ ಎಲ್ಲವೂ ಸುಖಾಂತ್ಯ ಕಂಡಿತು ಎಂದು ಭಾರತ ತಂಡದ ಮ್ಯಾನೇಜರ್,ಸಿಕ್ಕಿಂ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಿ.ಟೆಂಜಿಂಗ್ ಈ ವಿಷಯ ಈಗ ಹೇಳಿಕೊಂಡಿದ್ದಾರೆ.

Edited By :
PublicNext

PublicNext

23/02/2022 10:40 am

Cinque Terre

56.63 K

Cinque Terre

0

ಸಂಬಂಧಿತ ಸುದ್ದಿ