ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3 ಕೋಟಿಗೆ ‘ಬೇಬಿ ಎಬಿ’ ಖರೀದಿಸಿದ ಮುಂಬೈ ಇಂಡಿಯನ್ಸ್

ಬೆಂಗಳೂರು : ಐದು ಬಾರಿ ಚಾಂಪಿಯನ್ ಆಗಿರುವ IPL ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸ್ ಮುಂಬೈ ಇಂಡಿಯನ್ಸ್ (MI- Mumbai Indians) 15 ನೇ ಆವೃತ್ತಿಯಲ್ಲಿ ಅಳೆದುತೂಗಿ ಆಟಗಾರರನ್ನು ಹರಾಜಿನಲ್ಲಿ ತಮ್ಮ ತಂಡಕ್ಕೆ ಕರೆತಂದಿದೆ. IPL 2022 ಮೆಗಾ ಹರಾಜಿನ 1ನೇ ದಿನದಂದು MI ತಂಡ 'ಬೇಬಿ ಎಬಿ' ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಅವರನ್ನು 3 ಕೋಟಿಗೆ ಖರೀದಿಸಿದೆ.

'ಬೇಬಿ ಎಬಿ' ಎಂದು ಕರೆಯಲಾಗುವ ಡೆವಾಲ್ಡ್ ಬ್ರೆವಿಸ್ ಅವರನ್ನು 3 ಕೋಟಿಗೆ ಖರೀದಿಸಲಾಗಿತು. ಏಕೆಂದರೆ ಅವರ ಬ್ಯಾಟಿಂಗ್ ಶೈಲಿಯು ದಂತಕಥೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಅಬ್ ಡಿವಿಲಿಯರ್ಸ್ ಅವರನ್ನು ಹೋಲುತ್ತದೆ.

'ಬೇಬಿ ಎಬಿ' ಮೂಲ ಬೆಲೆಯ 15 ಪಟ್ಟು ಹೆಚ್ಚಳದೊಂದಿಗೆ ಅಂದ್ರೆ ₹ 3 ಕೋಟಿಗೆ MI ಖರೀದಿಸಿದೆ. ಇನ್ನು 18 ವರ್ಷದ ಬೇಬಿ ಎಬಿ ಇತ್ತೀಚೆಗೆ ಮುಕ್ತಾಯಗೊಂಡ 2022 ರ ಅಂಡರ್-19 ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

Edited By : Nirmala Aralikatti
PublicNext

PublicNext

13/02/2022 08:31 am

Cinque Terre

35.63 K

Cinque Terre

0

ಸಂಬಂಧಿತ ಸುದ್ದಿ