ಹೈದ್ರಬಾದ್:ನನ್ನ ಮಗಳು ದೇಶಕ್ಕೆ ಕೀರ್ತಿ ತಂದಿದ್ದಾಳೆ. ಆಕೆ ದೇಶಕ್ಕೆ ಮೆಡಲ್ ಕೂಡ ತಂದಿದ್ದಾಳೆ. ಆದರೆ ತಮಿಳು ನಟ ಸಿದ್ಧಾರ್ಥ್ ಏನ್ ಮಾಡಿದ್ದಾನೆ ಅಂತಲೇ ಸೈನಾ ನೆಹ್ವಾಲ್ ತಂದೆ ಹರ್ವೀರ್ ಸಿಟ್ಟಿಗೆದ್ದು ಸಿದ್ಧಾರ್ಥ್ಗೆ ಪ್ರಶ್ನೆ ಕೇಳಿದ್ದಾರೆ.
ನನ್ನ ಮಗಳು ದೇಶಕ್ಕಾಗಿ ಆಡಿದ್ದಾಳೆ. ಮೆಡಲ್ ಕೂಡ ತಂದಿದ್ದಾಳೆ. ಇಂತಹ ವ್ಯಕ್ತಿ ಬಗ್ಗೆ ಸಿದ್ಧಾರ್ಥ್ ಅಶ್ಲೀಲ ಪದ ಬಳಸಿ ಟ್ವೀಟ್ ಮಾಡಿರೋದು ಸರಿಯಿಲ್ಲ.ನಟ ಸಿದ್ಧಾರ್ಥ ಕ್ಷಮೆ ಕೇಳಲೇಬೇಕು ಅಂತಲೇ ಒತ್ತಾಯಿಸಿದ್ದಾರೆ ಸೈನಾ ನೆಹ್ವಾಲ್ ತಂದೆ ಹರ್ವೀರ್.
ಅಂದ್ಹಾಗೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭದ್ರತಾ ಲೋಪದ ಬಗ್ಗೆ ಟ್ವೀಟ್ ಮಾಡಿದ್ದರು. ಪ್ರಧಾನಿಗೇನೆ ಹೀಗಾದರೇ ಹೇಗೆ ? ಅಂತಲೇ ಸೈನಾ ನೆಹ್ವಾಲ್ ಪ್ರಶ್ನೆ ಕೇಳಿ ಟ್ವೀಟ್ ಮಾಡಿದ್ದರು. ಆದರೆ ಸುಮ್ಮನೆ ಕೂರದ ನಟ ಸಿದ್ಧಾರ್ಥ,"ಜಗತ್ತಿನ ಸೆಟ್ಲ್ ಕಾಕ್ ಚಾಂಪಿಯನ್', ದೇಶವನ್ನ ರಕ್ಷಿಸುವ ಜನ ನಮ್ಮಲ್ಲಿದ್ದಾರೆ' ಅಂತಲೇ ಟ್ವೀಟ್ ಮಾಡಿದ್ದರು. ಅದೇ ಈಗ ಸೈನಾ ತಂದೆ ಸಿಟ್ಟಿಗೆ ಕಾರಣ ಆಗಿದೆ.
PublicNext
11/01/2022 03:29 pm