ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 332 ರನ್‌ಗಳ ಬೃಹತ್ ಮೊತ್ತದಿಂದ ಮುನ್ನಡೆ ಸಾಧಿಸಿದೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 69 ರನ್ ಕಲೆಹಾಕಿದೆ ಉತ್ತಮ ಹಂತದಲ್ಲಿದೆ. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿರುವ ಚೇತೇಶ್ವರ್ ಪೂಜಾರ 51 ಎಸೆತಗಳಲ್ಲಿ 29 ರನ್ ಕಲೆಹಾಕಿದ್ದರೆ, ಮತ್ತೋರ್ವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 75 ಎಸೆತಗಳಲ್ಲಿ 38 ರನ್ ಕಲೆಹಾಕಿದ್ದಾರೆ.
ಸ್ಕೋರ್ ವಿವರ:
* ಮೊದಲ ದಿನ
ಭಾರತದ ಮೊದಲ ಇನ್ನಿಂಗ್ಸ್: 4 ವಿಕೆಟ್ ನಷ್ಟಕ್ಕೆ 221 ರನ್
* ಎರಡನೇ ದಿನ
ಭಾರತ ಮೊದಲ ಇನ್ನಿಂಗ್ಸ್: 109.5 ಓವರ್‌ಗಳಲ್ಲಿ 325 ರನ್‌ಗಳಿಗೆ 10 ವಿಕೆಟ್
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: 28.1 ಓವರ್‌ಗಳಲ್ಲಿ 62 ರನ್‌ಗಳಿಗೆ 10 ವಿಕೆಟ್
ಭಾರತದ ಎರಡನೇ ಇನ್ನಿಂಗ್ಸ್: 21 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 69 ರನ್
PublicNext
04/12/2021 06:13 pm