ಮುಂಬೈ: ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಎಜಾಜ್ ಪಟೇಲ್ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಬೌಲರ್ ಮತ್ತು ಕಿವೀಸ್‌ನ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಂಬೈನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇವರಿಗಿಂತ ಮೊದಲು ಇಂಗ್ಲೆಂಡ್‌ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ಜುಲೈ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಿಮ್ ಲೇಕರ್ ಈ ದಾಖಲೆ ಮಾಡಿದ್ದರೆ, ಕುಂಬ್ಳೆ ಫೆಬ್ರವರಿ 1999ರಲ್ಲಿ ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಈ ಇತಿಹಾಸ ಬರೆದಿದ್ದರು.
ಎಜಾಜ್ ಹಾಗೂ ಮುಂಬೈಗೆ ವಿಭಿನ್ನ ಬಾಂಧವ್ಯವಿದೆ. ಅವರು ಹುಟ್ಟಿದ್ದು ಮುಂಬೈ ನಗರದಲ್ಲಿ. ಎಜಾಜ್ 21 ಅಕ್ಟೋಬರ್ 1988ರಂದು ಮುಂಬೈನಲ್ಲಿ ಜನಿಸಿದ್ದರು. ಅವರು ಎಂಟು ವರ್ಷದವರಾಗಿದ್ದಾಗ, ಅವರ ಕುಟುಂಬವು ನ್ಯೂಜಿಲೆಂಡ್‌ನಲ್ಲಿ ನೆಲೆಯೂರಿತು. ಅಂದಿನಿಂದ ಅವರು ಆ ದೇಶದ ನಿವಾಸಿಯಾಗಿದ್ದಾರೆ.
ಇಂದಿನ ಪಂದ್ಯದಲ್ಲಿ ಒಟ್ಟು 47.5 ಓವರ್ ಬೌಲ್ ಮಾಡಿದ ಎಜಾಜ್ 119 ರನ್ ನೀಡಿ ಎಲ್ಲಾ ವಿಕೆಟ್ ಪಡೆದರು. ಅವರು ಒಟ್ಟು 19 ಮೇಡನ್ ಓವರ್ಗಳನ್ನು ಎಸೆದರು.
PublicNext
04/12/2021 03:06 pm