ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs NZ 2 Day: ವಿಕೆಟ್ ಉರುಳಿಸುವಲ್ಲಿ ಭಾರತ ವಿಫಲ- ಕಿವೀಸ್ ನಿಂದ ಉತ್ತಮ ಇನ್ನಿಂಗ್ಸ್

ಕಾನ್ಪುರ್: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ವೈಫಲ್ಯ ಎದುರಿಸುತ್ತಿದೆ. ಇದರೊಂದಿಗೆ ಕಿವೀಸ್ ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದೆ.

ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಮಧ್ಯಾಹ್ನ ಭಾರತ ತಂಡವು 111.1 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 345 ರನ್ ಗಳಿಸಿತ್ತು. ಬಳಿಕ‌ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ಯಾವುದೇ ವಿಕೆಟ್ ನಷ್ಟವಿಲ್ಲದೆ ಎರಡನೇ ದಿನದ ಆಟದ ಅಂತ್ಯದಲ್ಲಿ 129 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ಕಟ್ಟಿದೆ.

ಟಾಮ್ ಲ್ಯಾಥಮ್ 50 ರನ್ ಹಾಗೂ ವಿಲ್ ಯಂಗ್ 75 ರನ್ ಗಳಿಸಿ ಮೂರನೇ ದಿನದ ಆಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

ಭಾರತದ ಪರ ಶ್ರೇಯಸ್ ಅಯ್ಯರ್ ಅಜೇಯ 105 ರನ್, ರವೀಂದ್ರ ಜಡೇಜಾ ಅಜೇಯ 50 ರನ್, ಶುಭಮನ್ ಗಿಲ್ 52 ರನ್, ನಾಯಕ ಅಜಿಂಕ್ಯ ರಹಾನೆ 35 ರನ್, ಚೇತೇಶ್ವರ್ ಪೂಜಾರ 26 ರನ್ ಗಳಿಸಿದ್ದರು.

ಸ್ಕೋರ್ ವಿವರ:

ಮೊದಲ ದಿನ: ಭಾರತವು 84 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 258 ಗಳಿಸಿತ್ತು.

ಎರಡನೇ ದಿನ: ಭಾರತವು 111.1 ಓವರ್‌ಗಳಲ್ಲಿ 345 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತ್ತು

ಕಿವೀಸ್ ಮೊದಲ ಇನ್ನಿಂಗ್ಸ್ 57 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿದೆ

Edited By :
PublicNext

PublicNext

26/11/2021 06:19 pm

Cinque Terre

30.44 K

Cinque Terre

0

ಸಂಬಂಧಿತ ಸುದ್ದಿ