ಮುಂಬೈ: ಟಿ 20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಸದ್ಯ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರಿಂದ 5 ಕೋಟಿ ರೂ. ಮೌಲ್ಯದ 2 ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಯಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ಅವುಗಳನ್ನು ಜಪ್ತಿ ಮಾಡಿದೆ.
ಹಾರ್ದಿಕ್ ಪಾಂಡ್ಯ ಅವರ ಬಳಿ 5 ಕೋಟಿಯ ಈ ವಾಚ್‌ಗಳ ಬಿಲ್ ಇಲ್ಲದಿರುವುದೇ ಇದಕ್ಕೆ ಕಾರಣ. ಹಾರ್ದಿಕ್ ಪಾಂಡ್ಯ ಭಾನುವಾರ ತಂಡದೊಂದಿಗೆ ಭಾರತಕ್ಕೆ ಮರಳಿದರು. ಆದರೆ ಅವರನ್ನು ಏರ್ಪೋರ್ಟ್ನಲ್ಲೇ ತಡೆದ ಕಸ್ಟಮ್ಸ್ ಇಲಾಖೆ ಅವರ ದುಬಾರಿ ವಾಚ್‌ಗಳನ್ನು ಜಪ್ತಿ ಮಾಡಿದೆ ಎಂದು ವರದಿಯಾಗಿದೆ.
PublicNext
16/11/2021 08:54 am