ದುಬೈ: ಮಾರ್ಟಿನ್ ಗಪ್ಟಿಲ್ ಅರ್ಧಶತಕ, ಗ್ಲೆನ್ ಫಿಲಿಪ್ಸ್ ಉತ್ತಮ ಬ್ಯಾಟಿಂಗ್ ಸಹಾಯದಿಂದ ನ್ಯೂಜಿಲೆಂಡ್ ತಂಡವು ಸ್ಕಾಟ್ಲೆಂಡ್‌ಗೆ 173 ರನ್‌ಗಳ ಗುರಿ ನೀಡಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ನಾಯಕ ಕೈಲ್ ಕೋಟ್ಜರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 5 ವಿಕೆಟ್ ನಷ್ಟಕ್ಕೆ 172 ರನ್ ದಾಖಲಿಸಿದೆ.
ಕಿವೀಸ್ ಪರ ಆರಂಭಿಕನಾಗಿ ಮೈದಾನಕ್ಕಿಳಿದ ಮಾರ್ಟಿನ್ ಗಪ್ಟಿಲ್ ಶತಕ ಸಂಭ್ರಮವನ್ನು ಕೈ ಚೆಲ್ಲಿದರು. ಅವರು 56 ಎಸೆತಗಳಲ್ಲಿ 93 ರನ್ (6 ಬೌಂಡರಿ, 7 ಸಿಕ್ಸ್) ಸಿಡಿಸಿದರು. ಇನ್ನು ಗ್ಲೆನ್ ಫಿಲಿಪ್ಸ್ 33 ರನ್ ಗಳಿಸಿದರೆ, ಡೇರಿಲ್ ಮಿಚೆಲ್ (13 ರನ್), ನಾಯಕ ಕೇನ್ ವಿಲಿಯಮ್ಸನ್ (0 ರನ್) ಹಾಗೂ ಡೆವೊನ್ ಕಾನ್ವೇ (1 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದರು.
ಇನ್ನು ಸ್ಕಾಟ್ಲೆಂಡ್ ಪರ ಬ್ರಾಡ್ ವೀಲ್, ಸಫ್ಯಾನ್ ಷರೀಫ್ ತಲಾ 2 ವಿಕೆಟ್ ಕಿತ್ತರೆ, ಮಾರ್ಕ್ ವ್ಯಾಟ್ ಒಂದು ವಿಕೆಟ್ ಉರುಳಿಸಿದರು.
PublicNext
03/11/2021 05:24 pm