ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನ ಗೆಲವು : ಮೈದಾನದಲ್ಲಿಯೇ ಕಣ್ಣೀರಿಟ್ಟ ಬಾಬರ್ ಅಜಮ್ ತಂದೆ

ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಭರ್ಜರಿ ಜಯ ಸಾಧಿಸಿದೆ. ಇನ್ನು ಇದು ಪಾಕ್ ಪಾಲಿಗೆ ಐತಿಹಾಸಿಕ ಸಾಧನೆಯೂ ಹೌದು. ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಬಂದಿದ್ದ ಪಾಕ್ ನಾಯಕ ಬಾಬರ್ ಅಜಮ್ ತಂದೆ ಅಜಂ ಮಗನ ಅದ್ಭುತ ಸಾಧನೆ ನೋಡಿ ಕಣ್ಣೀರಿಟ್ಟಿದ್ದಾರೆ.

ಇನ್ನು ಹೆತ್ತವರಿಗೆ ಮಕ್ಕಳ ಜಯ ಕಾಣುವುದೇ ಸಂತಸ. ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವಿಗೆ ಬಾಬರ್ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅವರ ನಾಯಕತ್ವದಿಂದ ಮಾತ್ರವಲ್ಲದೆ ಬ್ಯಾಟಿಂಗ್ ನಲ್ಲೂ ಮಿಂಚಿದರು. ಬಾಬರ್ ಅಜಮ್ ವಿಶ್ವಕಪ್ ವೇದಿಕೆಯಲ್ಲಿ ಭಾರತವನ್ನು ಸೋಲಿಸಿದ ಪಾಕ್ ನ ಮೊದಲ ನಾಯಕರಾದರು.

ಭಾರತದ ವಿರುದ್ಧ ಪಾಕಿಸ್ತಾನದ ವಿಜಯದ ನಂತರ, ಸ್ಟೇಡಿಯಂನ ವೈರಲ್ ಆದ ವೀಡಿಯೊದಲ್ಲಿ ಪಾಕ್ ನಾಯಕನ ತಂದೆ ಗೆಲುವಿನ ನಂತರ ಕಣ್ಣೀರು ಹಾಕಿದನ್ನು ಕಾಣಬಹುದು.

Edited By : Nirmala Aralikatti
PublicNext

PublicNext

25/10/2021 03:53 pm

Cinque Terre

53.57 K

Cinque Terre

0

ಸಂಬಂಧಿತ ಸುದ್ದಿ