ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿ20 ವಿಶ್ವಕಪ್‌ನಲ್ಲಿ ಕನ್ನಡಿಗ ಕೆಎಲ್ ಭಾರತಕ್ಕೆ ಬಹುದೊಡ್ಡ ಆಸ್ತಿ: ಕಪಿಲ್ ದೇವ್ ಗುಣಗಾನ

ನವದೆಹಲಿ: ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಹೊಂದಿರುವ ಬಹುದೊಡ್ಡ ಆಸ್ತಿ ಎಂದರೆ ಅದು ಕೆ.ಎಲ್‌. ರಾಹುಲ್‌ ಎಂದು 1983ರಲ್ಲಿ ಭಾರತಕ್ಕೆ ಮೊದಲ ಒಡಿಐ ವಿಶ್ವಕಪ್‌ ಗೆದ್ದು ಕೊಟ್ಟ ನಾಯಕ ಕಪಿಲ್‌ ದೇವ್‌ ಗುಣಗಾನ ಮಾಡಿದ್ದಾರೆ.

ಐಪಿಎಲ್​​ ಟೂರ್ನಿಯಲ್ಲಿ ಆಡಿದ 13 ಇನಿಂಗ್ಸ್‌ಗಳಿಂದ 626 ರನ್‌ಗಳನ್ನು ಸಿಡಿಸಿರುವ ರಾಹುಲ್‌, ಅದೇ ಲಯವನ್ನು ಈಗ ವಿಶ್ವಕಪ್​​ನ ಅಭ್ಯಾಸ ಪಂದ್ಯಗಳಲ್ಲೂ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ಜತೆ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಲಿರುವ ಕೆಎಲ್ ರಾಹುಲ್‌, ವಿಶ್ವಕಪ್​​​ನಲ್ಲಿ ಭಾರತಕ್ಕೆ ಯಶಸ್ಸು ತಂದುಕೊಡಲಿ ಎಂದು ಕಪಿಲ್‌ ದೇವ್ ಹಾರೈಸಿದ್ದಾರೆ.

"ಕೆಎಲ್ ರಾಹುಲ್‌ ಅವರ ಬ್ಯಾಟಿಂಗ್‌ ವೀಕ್ಷಿಸುವುದೆಂದರೆ ನನಗೆ ಬಲು ಪ್ರೀತಿ. ತಮ್ಮ ಹೊಡೆತಗಳ ಮೇಲೆ ಅವರಿಗೆ ಅಪಾರ ವಿಶ್ವಾಸವಿದೆ. ಈಗ ಅವರೊಟ್ಟಿಗೆ ಅನುಭವ ಕೂಡ ಬೆನ್ನಿಗೆ ನಿಂತಿದೆ. ಹೀಗಾಗಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ರಾಹುಲ್‌ ಟೀಂ ಇಂಡಿಯಾದ ಬಹುದೊಡ್ಡ ಆಸ್ತಿ ಆಗಿದ್ದಾರೆ. ಅವರ ಆಟವನ್ನು ನಾನು ಸದಾ ಆನಂದಿಸಿದ್ದೇನೆ. ಭಾರತೀಯ ಕ್ರಿಕೆಟ್‌ಗೆ ಅವರು ಮುಂದಿನ ದಿನಗಳಲ್ಲಿ ಬಹುದೊಡ್ಡ ಕೊಡುಗೆ ಕೊಡಲಿದ್ದಾರೆ ಎಂದು ನಂಬಿದ್ದೇನೆ" ಎಂದು ಕಪಿಲ್‌ ದೇವ್‌ ವಿಶ್ವಾಸ ಹೊರಹಾಕಿದ್ದಾರೆ.

Edited By : Vijay Kumar
PublicNext

PublicNext

22/10/2021 09:58 am

Cinque Terre

42.77 K

Cinque Terre

3