ದುಬೈ: ಕ್ರಿಕೆಟ್ ಪ್ರೇಮಿಗಳ ಅಚ್ಚು-ಮೆಚ್ಚಿನ ಐಪಿಎಲ್ ಪಂದ್ಯಗಳು ನಿನ್ನೆಗೆ ಪೂರ್ಣಗೊಂಡಿವೆ. ಅಂತಿಮ ಪಂದ್ಯದಲ್ಲಿ ಸಿ.ಎಸ್.ಕೆ. ಪಂದ್ಯವನ್ನ ಗೆದ್ದು ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ.ಇಡೀ ಐಪಿಎಲ್ ಪಂದ್ಯದಲ್ಲಿ ಯಾರ ಆಟ ಹೇಗಿತ್ತು ? ಮತ್ಯಾರು ಎಷ್ಟು ಸಿಕ್ಸ್ ಹೊಡೆದರು ? ಅನ್ನೋ ಪ್ರಶ್ನೆಗೆ ಉತ್ತರ ನಿನ್ನೆನೆ ಸಿಕ್ಕಿದೆ. ಆ ವಿನ್ನರ್ ಗಳ ಟೋಟಲ್ ಪಟ್ಟಿ ಇಲ್ಲಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಿಜಕ್ಕೂ ರೋಚಕ ಪಂದ್ಯಗಳ ಲೀಗ್ ಆಗಿತ್ತು. ಪ್ರತಿ ಪಂದ್ಯವನ್ನ ಜನ ಅಷ್ಟೇ ಕುತೂಹಲದಿಂದಲೇ ವೀಕ್ಷಿಸಿದರು. ತಂಡಗಳ ಗೆಲುವಿನ ವಿಚಾರದಲ್ಲಿ ವೀಕ್ಷಕರ ಲೆಕ್ಕ ಕೆಲವೊಮ್ಮೆ ಬುಡಮೇಲೂ ಆಗಿದೆ. ಆದರೆ ಐಪಿಎಲ್ ಪಂದ್ಯದಲ್ಲಿ ಆಟವಾಡಿದ ಎಲ್ಲ ಪ್ಲೇಯರ್ ಗಳ ಆಟದ ಲೆಕ್ಕ ಈ ಅವಾರ್ಡ್ ವಿನ್ನಿಂಗ್ ಲಿಸ್ಟ್ ಅಲ್ಲಿದೆ.
-ಕೆಕೆಆರ್ ಆಲ್ ರೌಂಡರ್ ಆಟಗಾರ ವೆಂಕಟೇಶ್ ಐಯರ್: ಲೀಗ್ ನ ಪವರ್ ಪ್ಲೇಯರ್
-30 ಸಿಕ್ಸ್ ಹೊಡೆದ ಪಿಬಿಕೆಎಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್: ಅತಿ ಹೆಚ್ಚು ಸಿಕ್ಸ್ ಪ್ರಶಸ್ತಿ
- 635 ರನ್ ಹೊಡೆದ ಸಿ.ಎಸ್.ಕೆ ಓಪ್ನರ್ ರುತುರಾಜ್ ಗಾಯ್ಕವಾಡ್: ಆರೆಂಜ್ ಕ್ಯಾಪ್
-32 ವಿಕೆಟ್ ಉರುಳಿಸಿರೋ ಆರ್.ಸಿ.ಬಿ ಆಟಗಾರ ಹರ್ಷಲ್ ಪಟೇಲ್:ಪರ್ಪಲ್ ಕ್ಯಾಪ್
- ರುತುರಾಜ್ ಗಾಯ್ಕವಾಡ್: ಉದಯೋನ್ಮುಕ ಆಟಗಾರ ಪ್ರಶಸ್ತಿ
ಐಪಿಎಲ್ ಕೊನೆಯ ಪಂದ್ಯದಲ್ಲಿ ಈ ಎಲ್ಲ ಪ್ರಶಸ್ತಿಗಳೂ ಆಯಾ ಆಟಗಾರರಿಗೆ ಕೊಡಲಾಗಿದೆ. ಕ್ರಿಕೆಟ್ ಪ್ರೇಮಿಗಳೂ ಕೂಡ ಇದನ್ನ ಕಂಡು ಖುಷಿಪಟ್ಟಿದ್ದಾರೆ. ಆದರೆ ಪಂದ್ಯ ಮುಗಿದೇ ಹೋದವಲ್ಲ ಅನ್ನೋ ಬೇಸರ ಅವರನ್ನ ಕಾಡಿದಂತೂ ಅಷ್ಟೇ ಸತ್ಯ.
PublicNext
16/10/2021 03:50 pm