ನವದೆಹಲಿ: ಪುರುಷರ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಟೂರ್ನಿಯಲ್ಲಿ ವಿಜೇತ, ರನ್ನರ್ಸ್ ಅಪ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಘೋಷಣೆ ಮಾಡಿದೆ.
ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಯುಎಇ ಮತ್ತು ಒಮನ್‌ನಲ್ಲಿ ನಡೆಯಲಿದೆ. ಐಸಿಸಿ ನೀಡಿದ ಮಾಹಿತಿ ಪ್ರಕಾರ, ವಿಜೇತ ತಂಡಕ್ಕೆ 1.6 ಮಿಲಿಯನ್ ಡಾಲರ್ (ಸುಮಾರು 12 ಕೋಟಿ ರೂ.) ಬಹುಮಾನ ಸಿಗಲಿದೆ. ಇನ್ನು ರನ್ನರ್ಸ್ ಅಪ್ ತಂಡಕ್ಕೆ ಸುಮಾರು 6 ಕೋಟಿ ರೂ. ದೊರೆಯಲಿದೆ. ಸೋತ ಎರಡು ಸೆಮಿ ಫೈನಲಿಸ್ಟ್ ತಂಡಗಳಿಗೆ ತಲಾ 4 ಲಕ್ಷ ಡಾಲರ್ (ಸುಮಾರು 3 ಕೋಟಿ ರೂ.) ಬಹುಮಾನ ಪಡೆಯಲಿವೆ.
ಸೂಪರ್ 12 ಹಂತದಲ್ಲಿ ಪ್ರತಿ ಗೆಲುವಿಗಾಗಿ ಐಸಿಸಿ ಬೋನಸ್ ಮೊತ್ತ ನೀಡಲಾಗುತ್ತದೆ. ಸೂಪರ್ 12 ಹಂತದಲ್ಲಿ ನಾಕ್ ಔಟ್ ಮಾಡುವ ತಂಡಗಳಿಗೆ ತಲಾ 70 ಸಾವಿರ ಡಾಲರ್ (ಸುಮಾರು 52 ಲಕ್ಷ ರೂ.) ನೀಡಲಾಗುವುದು. ಈ ಎಲ್ಲವನ್ನೂ ಒಟ್ಟುಗೂಡಿದರೆ ಟಿ20 ವಿಶ್ವಕಪ್‌ಗೆ 5.6 ಮಿಲಿಯನ್ ಡಾಲರ್ (ಸುಮಾರು 42 ಕೋಟಿ ರೂಪಾಯಿ) ಮೀಸಲು ಇಡಲಾಗಿದ್ದು, ಈ ಹಣವನ್ನು ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ 16 ತಂಡಗಳಿಗೆ ನೀಡಲಾಗುತ್ತದೆ.
PublicNext
10/10/2021 06:08 pm