ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021 | SRH vs KKR: ಮತ್ತೆ ಹೈದರಾಬಾದ್ ಬ್ಯಾಟಿಂಗ್ ವೈಫಲ್ಯ- ಕೆಕೆಆರ್‌ಗೆ 116 ರನ್‌ಗಳ ಗುರಿ

ದುಬೈ: ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 116 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಆದರೆ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 115 ರನ್‌ ಗಳಿಸಲು ಹೈದರಾಬಾದ್ ತಂಡವು ಶಕ್ತವಾಯಿತು.

ಹೈದರಾಬಾದ್ ಪರ ನಾಯಕ ಕೇನ್ ವಿಲಿಯಮ್ಸನ್ 26 ರನ್, ಪ್ರಿಯಂ ಗರ್ಗ್ 21 ರನ್ ಹಾಗೂ ಅಬ್ದುಲ್ ಸಮದ್ 25 ರನ್ ಗಳಿಸಿದರು. ಇನ್ನು ಕೋಲ್ಕತ್ತಾ ಪರ ಟಿಮ್ ಸೌಥಿ, ಶಿವಂ ಮಾವಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಉರುಳಿಸಿದರೆ, ಶಕೀಬ್ ಅಲ್ ಹಸನ್ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.

Edited By : Vijay Kumar
PublicNext

PublicNext

03/10/2021 09:11 pm

Cinque Terre

45.69 K

Cinque Terre

0