ಶಾರ್ಜಾ: ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿಯ ಅಬ್ಬರದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ 44 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು 135 ರನ್‌ಗಳ ಗುರಿ ನೀಡಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ತಂಡವು ಎರಡು ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ರೋಚಕ ಗೆಲುವು ಸಾಧಿಸಿದೆ. ತಂಡದ ಪರ ಋತುರಾಜ್ ಗಾಯಕ್ವಾಡ್ 45 ರನ್, ಫಾಫ್ ಡು ಪ್ಲೆಸಿಸ್ 41 ರನ್ ಗಳಿಸಿದರು. ಕೊನೆಯಲ್ಲಿ ಅಂಬಾಟಿ ರಾಯುಡು ಅಜೇಯ 17 ರನ್ ಹಾಗೂ ನಾಯಕ ಎಂ.ಎಸ್.ಧೋನಿ ಅಜೇಯ 14 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಹೈದರಾಬಾದ್ ತಂಡವು 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತ್ತು. ತಂಡದ ಪರ ವೃದ್ಧಿಮಾನ್ ಸಹಾ 44 ರನ್ (46 ಎಸೆತ, 1 ಬೌಂಡರಿ, 2 ಸಿಕ್ಸರ್), ಅಭಿಷೇಕ್ ಶರ್ಮಾ ಹಾಗೂ ಅಬ್ದುಲ್ ಸಾದಮ್ ತಲಾ 18 ರನ್ ಗಳಿಸಿದ್ದರು. ಇನ್ನು ಚೆನ್ನೈ ಪರ ಜೋಶ್ ಹೇಜಲ್‌ವುಡ್ 3 ವಿಕೆಟ್, ಡ್ವೇನ್ ಬ್ರಾವೋ 2 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದರು.
PublicNext
30/09/2021 11:07 pm