ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 20201 | RR vs SRH: ಜೇಸನ್ ರಾಯ್, ವಿಲಿಯಮ್ಸನ್ ಬಿರುಸಿನ ಫಿಫ್ಟಿ- ಹೈದರಾಬಾದ್‌ಗೆ 7 ವಿಕೆಟ್‌ಗಳಿಂದ ಗೆಲುವು

ದುಬೈ: ಜೇಸನ್ ರಾಯ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಬಿರುಸಿನ ಅರ್ಧಶತಕ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್‌ ವಿರುದ್ಧ 7 ವಿಕೆಟ್‌ ಗೆಲುವು ದಾಖಲಿಸಿದೆ.

ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ದುಬೈಯಲ್ಲಿ ನಡೆದ 40ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 5 ವಿಕೆಟ್ ನಷ್ಟಕ್ಕೆ 164 ರನ್‌ ಗಳಿಸಿತ್ತು. 165 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್ ತಂಡವು 3 ವಿಕೆಟ್‌ ನಷ್ಟಕ್ಕೆ 167 ರನ್‌ ಗಳಿಸಿ ಗೆಲುವು ದಾಖಲಿಸಿದೆ.

ಹೈದರಾಬಾದ್ ಪರ ಆಡಿದ ಮೊದಲ ಪಂದ್ಯದಲ್ಲೇ ಜೇಸನ್ ರಾಯ್ ಅಬ್ಬರಿಸಿದರು. ಅವರು 42 ಎಸೆತಗಳಲ್ಲಿ 60 ರನ್‌ (8 ಬೌಂಡರಿ, 1 ಸಿಕ್ಸ್) ಸಿಡಿಸಿದರು. ನಾಯಕ ಕೇನ್ ವಿಲಿಯಮ್ಸನ್ ರನ್, ಅಭಿಷೇಕ ಶರ್ಮಾ ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ 5 ವಿಕೆಟ್ ನಷ್ಟಕ್ಕೆ 164 ರನ್‌ ಗಳಿಸಿತ್ತು. ತಂಡದ ಪರ ನಾಯಕ ಸಂಜು ಸ್ಯಾಮ್ಸನ್ 82 ರನ್ (57 ಎಸೆತ, 7 ಬೌಂಡರಿ, 3 ಸಿಕ್ಸ್‌) ಯಶಸ್ವಿ ಜೈಸ್ವಾಲ್ 36 ರನ್, ಮಹಿಪಾಲ್ ಲೊಮರ್ ಅಜೇಯ 29 ರನ್ ಗಳಿಸಿದ್ದರು.

Edited By : Vijay Kumar
PublicNext

PublicNext

27/09/2021 11:01 pm

Cinque Terre

40.5 K

Cinque Terre

2

ಸಂಬಂಧಿತ ಸುದ್ದಿ