ದುಬೈ: ಕೊನೆಯ ಓವರ್ ನಲ್ಲಿ ರೋಚಕ ತಿರುವು ಪಡೆದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಎರಡು ರನ್‌ಗಳಿಂದ ಗೆದ್ದು ಬೀಗಿದೆ.
ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆದ 32ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 186 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 4 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಲು ಶಕ್ತವಾಯಿತು.
ಪಂಜಾಬ್ ಪರ ಮಯಾಂಕ್ ಅಗರ್ವಾಲ್ 67 ರನ್ (43 ಎಸೆತ, 7 ಬೌಂಡರಿ, 2 ಸಿಕ್ಸರ್), ನಾಯಕ ಕೆ.ಎಲ್.ರಾಹುಲ್ 49 ರನ್ (33 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಆದರೆ ನಿಕೋಲಸ್ ಪೂರನ್ (32 ರನ್) ಸ್ಫೋಟಕ ಆಟಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ದೀಪಕ್ ಹೂಡಾ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ಪರಿಣಾಮ ಪಂಜಾಬ್ ಸೋಲಿಗೆ ತುತ್ತಾಯಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆರ್ ಆರ್ ನಿಗದಿತ 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತ್ತು. ತಂಡದ ಪರ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 49 ರನ್, ಮಹಿಪಾಲ್ ಲೋಮರ್ 43 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸರ್), ಎವಿನ್ ಲೂಯಿಸ್ (ಪದಾರ್ಪಣೆ ಪಂದ್ಯದಲ್ಲೇ) 36 ರನ್ ಗಳಿಸಿದ್ದರು.
ಪಂಜಾಬ್ ಕಿಂಗ್ಸ್ ಪರ ಆರ್ಷದೀಪ್ ಸಿಂಗ್ ಅಮೋಘ ಬಾಲಿಂಗ್ ಪ್ರದರ್ಶನ ನೀಡಿದ್ದರು. 4 ಓವರ್ ಬೌಲಿಂಗ್ ಮಾಡಿದ ಅವರು 32 ರನ್ ನೀಡಿ ಪ್ರಮುಖ 5 ವಿಕೆಟ್ ಕಿತ್ತರು. ಇನ್ನು ಅನುಭವಿ ಬೌಲರ್ ಮೊಹಮ್ಮದ್ ಶಮಿ 3 ವಿಕೆಟ್, ಇಶಾನ್ ಪೊರೆಲ್ ಹಾಗೂ ಹರ್ದೀಪ್ ಬ್ರಾರ್ ತಲಾ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.
PublicNext
21/09/2021 11:52 pm