ದುಬೈ: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಕೆಆರ್ ತಂಡವು ಆರ್‌ಸಿಬಿ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ಇಂದು ನಡೆದ 31ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 19ನೇ ಓವರ್ ಮುಕ್ತಾಯಕ್ಕೆ ಸರ್ವಪತನ ಕಂಡು ಕೇವಲ 92 ರನ್ ಗಳಿಸಲು ಶಕ್ತವಾಗಿತ್ತು. ಈ ಸಾಧಾರಣ ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ 94 ಎಸೆತಗಳು ಬಾಕಿ ಇರುವಂತೆ ಒಂದು ವಿಕೆಟ್ ನಷ್ಟಕ್ಕೆ ... ರನ್ ಗಳಿಸಿತು. ತಂಡದ ಪರ ಶುಭ್‌ಮನ್ ಗಿಲ್ 48 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿದರೆ, ವೆಂಕಟೇಶ್ ಅಯ್ಯರ್ ಅಜೇಯ 41 ರನ್ (27 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿದರು. ಈ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
PublicNext
20/09/2021 10:27 pm