ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL: CSK vs MI; ಪಂದ್ಯ ವೀಕ್ಷಿಸಿದ ಕಿಚ್ಚ ಸುದೀಪ್

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಭಾನುವಾರ) ನಡೆದ ಐಪಿಎಲ್ 14ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್‌ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 20 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯವನ್ನು ವೀಕ್ಷಿಸಲು ಕನ್ನಡದ ಖ್ಯಾತ ಚಲನಚಿತ್ರ ನಟ ಕಿಚ್ಚ ಸುದೀಪ್ ಆಗಮಿಸಿದ್ದರು.

ಹೌದು. ಇತ್ತೀಚೆಗಷ್ಟೇ ಐಪಿಎಲ್ ವೀಕ್ಷಿಸಲು ಕಿಚ್ಚ ಸುದೀಪ್ ದುಬೈ ಪ್ರಯಾಣವನ್ನು ಕೈಗೊಂಡಿದ್ದ ಸುದ್ದಿ ವೈರಲ್ ಆಗಿತ್ತು. ದುಬೈಗೆ ಬಂದಿಳಿದ ಕಿಚ್ಚ ಸುದೀಪ್ ಅವರಿಗೆ ಆದರದ ಸ್ವಾಗತವನ್ನು ಕೋರಿದ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯವನ್ನು ಮೈದಾನಕ್ಕೆ ಆಗಮಿಸಿ ವೀಕ್ಷಿಸಿದ್ದು, ಕಿಚ್ಚ ಸುದೀಪ್ ಪಂದ್ಯವನ್ನು ವೀಕ್ಷಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Edited By : Vijay Kumar
PublicNext

PublicNext

20/09/2021 03:37 pm

Cinque Terre

26.96 K

Cinque Terre

0