ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಲಸಿತ್ ಮಾಲಿಂಗ

ಕೊಲಂಬೋ: ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್ ಮತ್ತು ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದ ಲಸಿತ್ ಮಾಲಿಂಗ ಟಿ20 ಮಾದರಿಯಲ್ಲಿ ಮಾತ್ರ ಆಡುತ್ತಿದ್ದರು.

ಸದ್ಯ ವಿಶ್ವಕಪ್ ಗಾಗಿ ಪ್ರಕಟಿತ ಶ್ರೀಲಂಕಾ ತಂಡದಲ್ಲಿ ಮಾಲಿಂಗ ಹೆಸರು ಇಲ್ಲಾ.. ಟ್ವಿಟರ್ ಮೂಲಕ ಲಸಿತ್ ಮಾಲಿಂಗ ತಾನು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿರುವ ಸಂಗತಿ ತಿಳಿಸಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 14) ಟ್ವೀಟ್ ಮಾಡಿದ್ದ ಮಾಲಿಂಗ, ನಾನು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಪ್ರಯಾಣದುದ್ದಕ್ಕೂ ಯಾರೆಲ್ಲಾ ನನಗೆ ಬೆಂಬಲ ನೀಡಿದ್ದರೋ ಅವರಿಗೆಲ್ಲಾ ನಾನು ಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನನ್ನ ಅನುಭವಗಳನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳುತ್ತೇನೆ, ಎಂದು ಬರೆದುಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಲಸಿತ್ ಮಾಲಿಂಗ ಎಂಐ ಅನೇಕ ಸಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.

2021ರ ಆವೃತ್ತಿಯಲ್ಲಿ ವೈಯಕ್ತಿಕ ಕಾರಣ ನೀಡಿದ್ದ ಮಾಲಿಂಗ ಐಪಿಎಲ್ ನಿಂದ ದೂರ ಉಳಿಸಿದ್ದರು. ಬಲಗೈ ವೇಗಿಯಾಗಿದ್ದ 38ರ ಹರೆಯದ ಮಾಲಿಂಗ, ಶ್ರೀಲಂಕಾ ಕ್ರಿಕೆಟ್ ತಂಡದ ಪರ 30 ಟೆಸ್ಟ್ ಪಂದ್ಯಗಳಲ್ಲಿ 101 ವಿಕೆಟ್ ಗಳು, 226 ಏಕದಿನ ಪಂದ್ಯಗಳಲ್ಲಿ 338 ವಿಕೆಟ್, 83 ಟಿ20ಐ ಪಂದ್ಯಗಳಲ್ಲಿ 107 ವಿಕೆಟ್ ಗಳು ಮತ್ತು 122 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್ ದಾಖಲೆ ಹೊಂದಿದ್ದಾರೆ.

Edited By : Nirmala Aralikatti
PublicNext

PublicNext

14/09/2021 06:45 pm

Cinque Terre

58.42 K

Cinque Terre

7