ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುರಿದು ಬಿದ್ದ ಶಿಖರ್ ಧವನ್ ದಾಂಪತ್ಯ ಜೀವನ?- ಆಯೇಷಾಗೆ ವಿಚ್ಛೇದನ.!

ನವದೆಹಲಿ: ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಪತ್ನಿ ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದ್ದಾರೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಅವರನ್ನು 8 ವರ್ಷಗಳ ಹಿಂದೆ ಶಿಖರ್ ವರಿಸಿದ್ದರು. 2ನೇ ಬಾರಿ ವಿಚ್ಛೇದಿತೆಯಾಗಿರುವುದನ್ನು ಆಯೇಷಾ ಧವನ್ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಘೋಷಿಸಿದ್ದಾರೆ. ಇತ್ತೀಚಿನ ಬೆಳವಣಿಗೆಗಳಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿರುವುದು ಅವರ ಪೋಸ್ಟ್‌ನಲ್ಲಿ ಸ್ಪಷ್ಟವಾಗಿದೆ. ಆದರೆ ಶಿಖರ್ ಧವನ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

35 ವರ್ಷದ ಧವನ್ 2012ರಲ್ಲಿ ತಮಗಿಂತ 10 ವರ್ಷ ಹಿರಿಯರಾದ ಆಯೇಷಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ 2014ರಲ್ಲಿ ಗಂಡು ಮಗು (ಜೋರಾವರ್) ಜನಿಸಿತ್ತು. ಭಾರತ ಮೂಲದ ಆಯೇಷಾ ಮೆಲ್ಬೋರ್ನ್ ನಿವಾಸಿಯಾಗಿದ್ದು, ಧವನ್ ಆಗಾಗ ಆಸೀಸ್‌ಗೆ ಹೋಗಿ ಬರುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅವರು ಪತ್ನಿಯಿಂದ ಸಂಪೂರ್ಣ ದೂರವಿದ್ದಾರೆ ಎನ್ನಲಾಗಿದೆ.

ಆಯೇಷಾ ಅವರಿಗೆ ಇದು ಎರಡನೇ ವಿವಾಹ. ಇದಕ್ಕೂ ಮೊದಲು ಆಸ್ಟ್ರೇಲಿಯಾ ಮೂಲದ ವ್ಯಾಪಾರಿ ಒಬ್ಬರನ್ನು ಮದುವೆಯಾಗಿದ್ದರು. ಅವರೊಟ್ಟಿಗೆ ಇಬ್ಬರು ಹೆಣ್ಣು ಮಕ್ಕಳನ್ನೂ ಪಡೆದಿದ್ದರು. ಬಳಿಕ ಇಬ್ಬರನ್ನೂ ತಮ್ಮದೇ ಮಕ್ಕಳನ್ನಾಗಿ ಶಿಖರ್ ಧವನ್ ಸ್ವೀಕರಿಸಿದ್ದರು. ಇದಾದ ನಂತರ ಧವನ್ ಮತ್ತು ಆಯೇಷಾ ದಂಪತಿಗೆ ಗಂಡು ಮಗು ಜನಿಸಿ, ಮಗನಿಗೆ ಜೋರಾವರ್ ಎಂದು ಹೆಸರಿಟ್ಟಿದ್ದರು. ಇವರಿಬ್ಬರ ವಿಚ್ಛೇದನ ಕುರಿತಾಗಿ ಈ ಹಿಂದೆ ವರದಿಗಳಾಗಿತ್ತು. ಈಗ ಆಯೇಷಾ ಬರೆದಿರುವ ಪೋಸ್ಟ್‌ ಮೂಲಕ ಖಾತ್ರಿಯಾಗಿದೆ.

"ವಿಚ್ಛೇದನ ಎಂಬುದು ಬಹಳ ಕೆಟ್ಟ ಪದ ಎಂದು ನಾನು ಭಾವಿಸಿದ್ದೆ. ಆದರೆ ನನ್ನ ಜೀವನದಲ್ಲಿ ಎರಡು ಬಾರಿ ವಿಚ್ಛೇದನ ಪಡೆಯುವಂತಾಗಿದೆ. ಈ ಪದಗಳು ಎಷ್ಟು ಬಲಿಷ್ಠವಾಗಿರುತ್ತವೆ ಮತ್ತು ನಮ್ಮ ಜೀವನದ ಭಾಗವಾಗಿರುತ್ತವೆ ಎಂಬುದು ತಮಾಷೆಯೇ ಸರಿ. ಮೊದಲ ಬಾರಿ ವಿಚ್ಛೇದನ ಪಡೆದಾಗ ನಾನು ಬಹಳ ಹೆದರಿದ್ದೆ, ಸೋತ ಅನುಭವವಾಗಿತ್ತು. ನಾನೇನೋ ತಪ್ಪು ಮಾಡಿದ್ದೇನೆ ಎಂದನ್ನಿಸಿತ್ತು. ವಿಚ್ಛೇದನ ನಿಜಕ್ಕೂ ಕೆಟ್ಟ ಪದ" ಎಂದು ಆಯೇಷಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

08/09/2021 07:48 am

Cinque Terre

39.53 K

Cinque Terre

7

ಸಂಬಂಧಿತ ಸುದ್ದಿ