ಢಾಕಾ:. ಇಲ್ಲಿನ ಶೇರ್ ಬಾಂಗ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೈಫ್ಯಲ್ಯ ಅನುಭವಿಸಿದ ಕಿವೀಸ್ ಪಡೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ತನ್ನ ಅತ್ಯಂತ ಕಡಿಮೆ ಮೊತ್ತಕ್ಕೆ ಆಲ್ ಔಟ್ ಆಗಿದೆ.
ಬಾಂಗ್ಲಾ ಬೌಲರ್ ಗಳ ದಾಳಿಗೆ ಉತ್ತರಿಸಲು ಕಿವೀಸ್ ಬ್ಯಾಟ್ಸ್ ಮನ್ ಗಳು ವಿಫಲರಾಗಿ ಪೆವಿಲಿಯನ್ ಪರೇಡ್ ನಡೆಸಿದ ಪರಿಣಾಮ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ 16.5 ಓವರ್ ಗಳಲ್ಲಿ 60 ರನ್ ಗಳ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಯಿತು.
ನಾಯಕ ಟಾಮ್ ಲೇಥಮ್ (18) ಮತ್ತು ಹೆನ್ರಿ ನಿಕೋಲ್ಸ್ (18) ಹೊರತಾಗಿ ಬೇರೆ ಯಾವ ಬ್ಯಾಟ್ಸ್ಮನ್ಗಳು ಕೂಡ 6 ರನ್ಗಳ ಗಡಿ ದಾಟದೇ ಹೋದರು.
ಪರಿಣಾಮ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ತಂಡ ತನ್ನ ಅತ್ಯಂತ ಕಡಿಮೆ ಮೊತ್ತದ ದಾಖಲೆಯನ್ನು ಮತ್ತೊಮ್ಮೆ ಸರಿಗಟ್ಟಿತು. ನ್ಯೂಜಿಲೆಂಡ್ ಪಡೆಗೆ ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್ ಅವರಂತಹ ಪ್ರಮುಖ ಬ್ಯಾಟ್ಸ್ ಮನ್ ಗಳ ಕೊರತೆ ಕಾಡುತ್ತಿರುವುರುವುದು ಈ ಮೂಲಕ ಸಾಬೀತಾಗಿದೆ.
ಬಾಂಗ್ಲಾ ತಂಡದ ಪರ ಅನುಭವಿ ಎಡಗೈ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಮೂರು ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರೆ, ಅವರಿಗೆ ಉತ್ತಮ ಸಾಥ್ ನೀಡಿದ ನಸುಮ್ ಅಹ್ಮದ್, ಶಕಿಬ್ ಅಲ್ ಹಸನ್ ಮತ್ತು ಮೊಹಮ್ಮದ್ ಸೈಫುದ್ದೀನ್ ತಲಾ ಎರಡು ವಿಕೆಟ್ ಪಡೆದು ನ್ಯೂಜಿಲೆಂಡ್ ಬ್ಯಾಟ್ಸ್ ಮನ್ಗಳನ್ನು ಬೇಟೆಯಾಡಿದರು.
ಪ್ರಥಮ ಟಿ20 ಪಂದ್ಯದ ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 16.5 ಓವರ್ ಗಳಲ್ಲಿ 60 ರನ್ಗಳಿಗೆ ಆಲ್ ಔಟ್ (ಟಾಮ್ ಲೇಥಮ್ 16, ಹೆನ್ರಿ ನಿಕೋಲ್ಸ್ 16; ಮುಸ್ತಾಫಿಝುರ್ ರೆಹಮಾನ್ 13ಕ್ಕೆ 3, ನಸುಮ್ ಅಹ್ಮದ್ 5ಕ್ಕೆ 2, ಶಕಿಬ್ ಅಲ್ ಹಸನ್ 10ಕ್ಕೆ 2, ಮೊಹಮ್ಮದ್ ಸೈಫುದ್ದೀನ್ 7ಕ್ಕೆ 2).
ಬಾಂಗ್ಲಾದೇಶ: 15 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 62 ರನ್ (ಶಕಿಬ್ ಅಲ್ ಹಸನ್ 25, ಮುಷ್ಫಿಕರ್ ರಹೀಮ್ ಅಜೇಯ 16, ಮಹ್ಮೂದುಲ್ಲ ಅಜೇಯ 14; ಏಜಾಝ್ ಪಟೇಲ್ 7ಕ್ಕೆ 1, ಕೋಲ್ ಮೆಕಾನ್ಷಿ 19ಕ್ಕೆ 1, ರಚಿನ್ ರವೀಂದ್ರ 21ಕ್ಕೆ 1).
PublicNext
01/09/2021 07:32 pm