ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರಜ್ ಜಾವೆಲಿನ್ ಕದ್ದಿದ್ದ ಪಾಕ್‌ನ ಅರ್ಷದ್ ನದೀಮ್.?

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್​ ಥ್ರೋ ಮೂಲಕ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೀರಜ್ ಚೋಪ್ರಾ, "ನಾನು ಜಾವೆಲಿನ್‌ಅನ್ನು ಹುಡುಕುತ್ತಿದ್ದೆ. ಇದ್ದಕ್ಕಿದ್ದಂತೆ ಪಾಕಿಸ್ತಾನದ ಅರ್ಷದ್ ನದೀಂ ಹಿಡಿದಿದ್ದನ್ನು ಓಡಾಡುತ್ತಿರುವುದನ್ನು ನಾನು ನೋಡಿದೆ. ನಾನು ಅವನಿಗೆ ಹೇಳಿದೆ, 'ಭಾಯ್... ಅದನ್ನ ನನಗೆ ಕೊಡು, ಅದು ನನ್ನದು! ನಾನು ಅದನ್ನು ಎಸೆಯಬೇಕು ಎಂದೆ. ಆತ ನನಗೆ ಜಾವೆಲಿನ್‌ಅನ್ನು ಹಿಂತಿರುಗಿಸಿದ" ಎಂದು ತಿಳಿಸಿದ್ದಾರೆ.

"ಇದರಿಂದಾಗಿಯೇ ನಾನು ಮೊದಲ ಎಸೆತವನ್ನು ಗಡಿಬಿಡಿಯಿಂದ ಮಾಡಿದ್ದನ್ನು ನೀವು ನೋಡಿರಬಹುದು. ಪಾಕಿಸ್ತಾನದ ನದೀಮ್​ ಉತ್ತಮ ಆಟಗಾರಿಕೆ ಪ್ರದರ್ಶಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾವಲೆನ್​ನಲ್ಲಿ ಉತ್ತಮ ಸ್ಥಾನ ಗಳಿಸಲು ಪಾಕಿಸ್ತಾನಕ್ಕೆ ಅವಕಾಶವಿದೆ" ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

Edited By : Vijay Kumar
PublicNext

PublicNext

25/08/2021 01:18 pm

Cinque Terre

38.96 K

Cinque Terre

2

ಸಂಬಂಧಿತ ಸುದ್ದಿ