ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ 364 ರನ್ ಕಲೆ ಹಾಕಿತ್ತು. ಆದರೆ ಬೌಲಿಂಗ್‌ನಲ್ಲಿ ಭಾರತವು ನಿರಸ ಪ್ರದರ್ಶನ ತೋರಿತು. ನಾಯಕ ಜೋ ರೂಟ್ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್, 27 ರನ್ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯ್ತು.
ಜೋ ರೂಟ್ ಹಾಗೂ ಜಾನಿ ಬೇರ್ಸ್ಟೋ ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್ಗಳು ಪರದಾಟ ನಡೆಸಿದರು. ಭಾರತದ ಬೌಲರ್ಗಳ ನೀರಸ ಪ್ರದರ್ಶನ ಕಂಡು ಕೋಚ್ ರವಿ ಶಾಸ್ತ್ರಿ ನಿದ್ದೆಗೆ ಜಾರಿದರು. ಶಾಸ್ತ್ರಿ ನಿದ್ದೆಗೆ ಜಾರಿದ್ದೆ ತಡ, ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
PublicNext
15/08/2021 02:17 pm