ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಹಳೆಯ ಇಂಟರ್ವ್ಯೂ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಖ್ಯಾತ ಇಂಗ್ಲೀಷ್ ಚಾನೆಲ್‌ನ ಮಹಿಳಾ ಆ್ಯಂಕರ್ ಒಬ್ಬರು ಈ ಹಿಂದೆ ನೀರಜ್ ಚೋಪ್ರಾ ಅವರ ಸಂದರ್ಶನ ಮಾಡಿದ್ದರು. ಈ ವೇಳ ಆ್ಯಂಕರ್ ಪರ್ಸನಲ್ ವಿಚಾರವಾಗಿ ಪ್ರಶ್ನಿಸಿದಾಗ ಉತ್ತರಿಸರುವ ನೀರಜ್ ಚೋಪ್ರಾ, "ನಾನು ಇಲ್ಲಿ ನಿಮ್ಮ ಮುಂದೆ ಹೇಗೆ ಕೂತಿದ್ದೇನೋ ಹಾಗೇ ಎಲ್ಲ ಸಮಯದಲ್ಲೂ ಇರುತ್ತೇನೆ" ಎಂದು ಹೇಳಿದ್ದಾರೆ.
ಉದ್ದ ಕೂದಲಿನ ಬಗ್ಗೆ ಕೇಳಿದಾಗ ನೀರಜ್ ಚೋಪ್ರಾ ಅವರು, "ನಾನು ಮೊದಲಿಂದಲೂ ಉದ್ದ ಕೂದಲು ಬಿಡುತ್ತಿದ್ದೇನೆ. ಮೊದಲಿಂದಲೂ ಉದ್ದಕೂದಲು ಅಂದ್ರೆ ಇಷ್ಟ. ನನ್ನ ಇಂಗ್ಲೀಷ್ ಅಷ್ಟೇನೂ ಸರಿಯಿಲ್ಲ. ಹೀಗಾಗಿ ನಾನು ಒಂದು ಅವಾರ್ಡ್ ಫಂಕ್ಷನ್ಗೆ ಹೋಗಿದ್ದಾಗಲೂ ಅಲ್ಲಿ ಹಿಂದಿಯಲ್ಲೇ ಮಾತಾಡೋಣ ಎಂದಿದ್ದೆ" ಎಂದರು.
ಭಾರತದಲ್ಲೂ ಜನರು ಇಂಗ್ಲೀಷ್ ಮಾತಾಡುತ್ತಾರೆ. ಆದರೆ ನನಗನ್ನಿಸುತ್ತೆ ಭಾರತದಲ್ಲಿ ನಾವು ಹಿಂದಿಗೆ ಸಪೋರ್ಟ್ ಮಾಡಬೇಕು. ಹಿಂದಿ ಮಾತಾಡುವವರನ್ನು ಕೀಳಾಗಿ ನೋಡಬಾರದು. ಹಿಂದೂಸ್ತಾನದಲ್ಲಿ ಇದ್ದೇವೆ ಅಂದಮೇಲೆ ಹಿಂದಿ ಮಾತಾಡಬೇಕು. ಇಂಗ್ಲೀಷನ್ನೂ ಕಲಿಯಬೇಕು. ಅದನ್ನೂ ಕಲಿಯಿರಿ. ಆದರೆ ಹಿಂದಿಯಲ್ಲೇ ಮಾತನಾಡಿ. ಅದರ ಬಗ್ಗೆ ಹೆಮ್ಮೆ ಪಡಿ. ನಮ್ಮ ಭಾಷೆಯ ಬಗ್ಗೆ ನಮಗೆ ಗರ್ವ ಇರಬೇಕು ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
PublicNext
11/08/2021 07:30 am